ಸಲ್ಮಾನ್ ಖಾನ್ ಮುಂಬೈ ಪೊಲೀಸರನ್ನು ಶ್ಲಾಘಿಸಿದರು

ಮುಂಬೈ ಪೊಲೀಸರು ಜನ ಮೆಚ್ಚುವ ಕೆಲಸ ಮಾಡಿದ್ದಾರೆ. ಇದನ್ನು ನೋಡಿ ಸಲ್ಮಾನ್ ಖಾನ್ ಕೂಡಾ ಅವರನ್ನು ತೀವ್ರವಾಗಿ ಹೊಗಳಿದ್ದಾರೆ. ಮುಂಬೈ ಪೊಲೀಸರನ್ನು ಶ್ಲಾಘಿಸಿ ನಟ ಟ್ವಿಟರ್‌ನಲ್ಲಿ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್ ಕೂಡ ಸಾಮಾಜಿಕ ಸಮಸ್ಯೆಗಳ ಬಗ್ಗೆ ಆಗಾಗ ಮಾತನಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಮುಂಬೈ ಪೊಲೀಸರು ಕಾಣಿಸಿದ ಒಂದು ತನಿಖಾ ಕಾರ್ಯವನ್ನು ನೋಡಿ ಸಲ್ಮಾನ್ ಖಾನ್, ಅವರನ್ನು ತೀವ್ರವಾಗಿ ಹೊಗಳಿದ್ದಾರೆ. ಮುಂಬೈ ಪೊಲೀಸರನ್ನು ಶ್ಲಾಘಿಸಿ ನಟ ಟ್ವಿಟರ್‌ನಲ್ಲಿ ಪೋಸ್ಟ್ ಕೂಡಾ ಹಂಚಿಕೊಂಡಿದ್ದಾರೆ.
ಮುಂಬೈ ಪೊಲೀಸರು ಮಕ್ಕಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಶ್ಲಾಘನೀಯ ತನಿಖಾ ಕೆಲಸ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಇಬ್ಬರು ವ್ಯಕ್ತಿಗಳು ಹೆಣ್ಣು ಮಗುವನ್ನು ಅಪಹರಿಸಿದ್ದರು. ಸಾಕಷ್ಟು ಪ್ರಯತ್ನದ ನಂತರ ಮುಂಬೈ ಪೊಲೀಸರು ಬಾಲಕಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಟ್ವೀಟ್‌ನಲ್ಲಿ, ಮುಂಬೈ ಪೊಲೀಸರು ಹೀಗೆ ಬರೆದಿದ್ದರು:
“ಕ್ರೈಮ್ ಬ್ರಾಂಚ್ ಯುನಿಟ್ ೯ ಸಹಯೋಗದೊಂದಿಗೆ ೧ ವರ್ಷದ ಬಾಲಕಿಯನ್ನು ಅಪಹರಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಅಪರಾಧದಿಂದ ತಪ್ಪಿಸಿಕೊಳ್ಳಲು ಆತ ಸೊಲ್ಲಾಪುರಕ್ಕೆ ಓಡಿ ಹೋಗಿದ್ದ, ಆದರೆ ಆತನನ್ನು ಪತ್ತೆಹಚ್ಚಿ ಮಗುವನ್ನು ತಾಯಿಗೆ ಒಪ್ಪಿಸಲಾಗಿದೆ” ಎಂದು.
ಸಲ್ಮಾನ್ ಖಾನ್ ಮುಂಬೈ ಪೊಲೀಸರ ಅಭಿಮಾನಿಯಾಗುತ್ತಾರೆಯೇ?:
ಮುಂಬೈ ಪೊಲೀಸರ ಈ ಶ್ಲಾಘನೀಯ ಕೆಲಸವನ್ನು ನೋಡಿದ ಸಲ್ಮಾನ್ ಪೊಲೀಸರನ್ನು ಹೊಗಳಿ ಬರೆದರು. ಟ್ವಿಟರ್‌ನಲ್ಲಿ ಸಲ್ಮಾನ್ ಖಾನ್, “ಮುಂಬೈ ಪೊಲೀಸರೇ, ದೇವರು ನಿಮ್ಮನ್ನು ಆಶೀರ್ವದಿಸಲಿ. ನಿಮಗೆ ತುಂಬಾ ಶಕ್ತಿ ದೊರೆಯಲೆಂದು ಪ್ರಾರ್ಥನೆಗಳು. ಮಕ್ಕಳ ಕಳ್ಳಸಾಗಣೆ ಮಾನವರು ಮಾಡುವ ಅತ್ಯಂತ ಘೋರ ಅಪರಾಧ. ಈ ಅಪರಾಧಿಗಳು ಮತ್ತು ಅವರ ಬೆಂಬಲಿಗರಿಗೆ ಕಠಿಣ ಶಿಕ್ಷೆಯಾಗಬೇಕು. ಎಲ್ಲಾ ಮಕ್ಕಳು ಮತ್ತೆ ಒಂದಾಗಲಿ ಮತ್ತು ಅವರ ಹೆತ್ತವರ ಬಳಿಗೆ ಹಿಂತಿರುಗಲಿ ಎಂದು ಪ್ರಾರ್ಥಿಸುವೆ.ಮುಂಬೈ ಪೊಲೀಸರಿಗೆ ದೇವರ ಆಶೀರ್ವಾದ ಸಿಗುತ್ತಿರಲಿ. ನಿಮಗೆ ಹೆಚ್ಚಿನ ಶಕ್ತಿ, ಪ್ರಾರ್ಥನೆಗಳು ಮತ್ತು ದುವಾಸ್” ಎಂದಿರುವರು.
ಸಲ್ಮಾನ್ ಖಾನ್ ಅವರ ಫಿಲ್ಮ್ ಗಳು: ಸಲ್ಮಾನ್ ಖಾನ್ ಅವರ ಹಲವು ಫಿಲ್ಮ್ ಗಳು ಬರಲಿವೆ. ಈ ದಿನಗಳಲ್ಲಿ ಅವರು ’ಬಿಗ್ ಬಾಸ್ ೧೬’ ನ್ನು ಹೋಸ್ಟ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರ ’ಟೈಗರ್ ೩’ ಮತ್ತು ’ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಫಿಲ್ಮ್ ಗಳು ಕೂಡ ಬರಲಿವೆ.

ಹಿನಾ ಖಾನ್ ಹೊಸ ಉಡುಪು ಧರಿಸಿದಾಗ…..

ಹಿನಾ ಖಾನ್ ಟಿವಿ ಪ್ರಪಂಚದ ಜನಪ್ರಿಯ ನಟಿ. ಟಿವಿ ಇಂಡಸ್ಟ್ರಿಯಲ್ಲಿ ಹೆಸರು ಗಳಿಸಿದ ನಂತರ, ನಟಿ ದೊಡ್ಡ ಪರದೆಯಲ್ಲೂ ತನ್ನ ಅದ್ಭುತವನ್ನು ತೋರಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಕ್ಷಣದಿಂದ ಕ್ಷಣಕ್ಕೆ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಜೀವನದ ಕೆಲವು ಘಟನೆ,ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.


ಹಿನಾ ಖಾನ್ ಅವರ ಇತ್ತೀಚಿನ ಫೋಟೋಗಳು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿವೆ. ನಟಿ ತನ್ನ ಶೈಲಿಯಿಂದ ಅಭಿಮಾನಿಗಳ ಹೃದಯವನ್ನು ಆಳುತ್ತಾರೆ. ಅವರ ಫೋಟೋಗಳಿಗಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ನಟಿ ತನ್ನ ಇತ್ತೀಚಿನ ಫೋಟೋಶೂಟ್ ನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಹಿನಾಖಾನ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರ ಇತ್ತೀಚೆಗೆ ಧರಿಸಿದ ಬಟ್ಟೆಗಳ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹಿನಾ ಖಾನ್ ಪಿಂಕ್ ಕಲರ್ ಶಾರ್ಟ್ ಡ್ರೆಸ್ ಧರಿಸಿರುವುದನ್ನು ಅದರಲ್ಲಿ ನೋಡಬಹುದು ಮತ್ತು ಅವರ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಹಚ್ಚಿದೆ. ಅಲ್ಲದೇ ಆಕೆಯ ಈ ಫೋಟೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿವೆ.


ನಟಿಯ ಫೋಟೋಗಳಲ್ಲಿ ಅವರು ತಮ್ಮ ಬೆನ್ನಿಲ್ಲದ ಉಡುಪನ್ನು ಆಕರ್ಷಕವಾಗಿ ತೋರಿಸುತ್ತಿರುವುದನ್ನು ಕಾಣಬಹುದು. ವಿಶೇಷವೆಂದರೆ ಈ ನಟಿಯ ಪ್ರತಿಯೊಂದು ಫೋಟೋದಲ್ಲಿಯೂ ವಿಭಿನ್ನ ಪೋಸ್‌ಗಳನ್ನು ನೀಡುತ್ತಿದ್ದಾರೆ. ಪೋಸ್ ನೀಡುತ್ತಿರುವ ನಟಿ ತುಂಬಾ ಹಾಟ್ ಆಗಿ ಕಾಣುತ್ತಿದ್ದು, ಕಿಲ್ಲರ್ ಆಕ್ಟ್ ಗಳಿಂದ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಿರುವುದನ್ನು ಕಾಣಬಹುದು.
ಈ ಫೋಟೋಗಳಿಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ನಟಿಯ ಈ ಫೋಟೋ ಇನ್‌ಸ್ಟಾಗ್ರಾಮ್‌ಗೆ ಬಂದ ತಕ್ಷಣ ವೈರಲ್ ಆಗುತ್ತಿದೆ.ಹಿನಾ ಖಾನ್ ತನ್ನ ಮಲಗುವ ಕೋಣೆಯಲ್ಲಿ ಕುಳಿತು ಕಿಲ್ಲರ್ ಪೋಸ್ ನೀಡಿದ್ದಾರೆ. ನಟಿಯ ಫೋಟೋ ನೋಡಿದ ಅಭಿಮಾನಿಗಳಿಗೆ ಅಲ್ಲಿಂದ ಕಣ್ಣು ಕೀಳುವುದೇ ಕಷ್ಟವಾಗುತ್ತಿದೆ.