ಸಲ್ಮಾನ್ ಖಾನ್ ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಈಗ ಪ್ರೊಡ್ಯೂಸರ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಶೀಘ್ರವೇ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಅಪ್ ಕಮಿಂಗ್ ಫಿಲ್ಮ್ ೯೨ ಡೇಯ್ಸ್ ಗಾಗಿ ಪ್ರೊಡ್ಯೂಸರ್ ಆಗಲಿದ್ದಾರೆ.
ಈ ಫಿಲ್ಮ್ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ. ಇದರಲ್ಲಿ ಸಲ್ಮಾನ್ ಖಾನ್ ಅವರ ಬಾವ ಆಯುಷ್ ಶರ್ಮಾ ಪ್ರಧಾನ ಪಾತ್ರದಲ್ಲಿದ್ದಾರೆ. ಫಿಲ್ಮ್ ನ ಕಥೆ ಒಂದು ರೋಡ್ ಟ್ರಿಪ್ಪಿನ ಆಧಾರಿತವಾಗಿದೆ.
ವಿಶೇಷ ಅಂದರೆ ಇದನ್ನು ಮೂವರು ನಿರ್ದೇಶಕರು ಸೇರಿ ನಿರ್ದೇಶನ ಮಾಡಲಿದ್ದಾರೆ.
ಸಲ್ಮಾನ್ ಖಾನ್ ರ ಪ್ರೊಡಕ್ಷನ್ ಹೌಸ್ ಎಸ್ ಕೆ ಎಫ್ ಓಟಿಟಿ ಗಾಗಿ ಫಿಲ್ಮ್ ಪ್ರೊಡಕ್ಷನ್ ಮಾಡುತ್ತಿರುವುದು ಇದೇ ಮೊದಲನೆಯ ಬಾರಿ.
ಸಲ್ಮಾನ್ ಖಾನ್ ಅವರಿಗಿಂತ ಮೊದಲು ಕೂಡ ಬಾಲಿವುಡ್ ಸ್ಟಾರ್ ಗಳು ಓಟಿಟಿ ಪ್ಲ್ಯಾಟ್ಪಾರ್ಮ್ ಗಾಗಿ ಫಿಲ್ಮ್ ಗಳನ್ನು ಮಾಡಿದ್ದಾರೆ. ಅವರಲ್ಲಿ ಶಾರುಖ್ ಖಾನ್, ಶಾಹಿದ್ ಕಪೂರ್, ಪ್ರೀತಿ ಜಿಂಟಾ, ತುಷಾರ್ ಕಪೂರ್, ಅನುಷ್ಕಾ ಶರ್ಮ ಮೊದಲಾದವರನ್ನು ಹೇಳಬಹುದು.

ಕೊರೊನಾ ಕಾಲದ ದೇಶದ ಸ್ಥಿತಿಯನ್ನು ಕಂಡು ಅತ್ತೇ ಬಿಟ್ಟರು ಶಿಲ್ಪಾ ಶೆಟ್ಟಿ

ಭಾರತವು ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಆರೋಗ್ಯ ದಿಂದ ಜನರಲ್ಲಿ ಹಾಹಾಕಾರವನ್ನು ಸೃಷ್ಟಿಸುತ್ತಿದ್ದು ಕೊರೊನಾ ರೋಗಿಗಳ ಸಂಖ್ಯೆ ಏರುತ್ತಲೇ ಇದೆ.ಅತ್ತ ಆಸ್ಪತ್ರೆಗಳಲ್ಲಿ ಬೆಡ್ಡ್ ಗಳ ಕೊರತೆ, ಆಕ್ಸಿಜನ್ ಸಿಲಿಂಡರ್ ಗಳ ಕೊರತೆ, ಔಷಧಿಗಳ ಕೊರತೆಯಿಂದ ಚಿಂತೆಗೀಡಾಗಿರುವ ಬಾಲಿವುಡ್ ಕೂಡ ಇದರಿಂದ ಹೊರತಾಗಿಲ್ಲ.


ನಟಿ ಶಿಲ್ಪಾ ಶೆಟ್ಟಿ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ದೇಶದ ಸದ್ಯದ ಸ್ಥಿತಿಗೆ ಅವರು ತೀವ್ರ ಚಿಂತೆ ವ್ಯಕ್ತಪಡಿಸಿದ್ದಾರೆ ಹಾಗೂ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಶುಕ್ರಿಯಾ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶಿಲ್ಪಾಶೆಟ್ಟಿ ದೇಶದಲ್ಲಿ ಸಾವಿರಾರು ಜನರ ಸಾವನ್ನು ಕಂಡು ಮಾತನಾಡುತ್ತಾ ಅತ್ತೇ ಬಿಟ್ಟರು. ಅವರು ಜನರಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವಂತೆಯೂ ವಿನಂತಿಸಿದ್ದಾರೆ. “ನಾವಿಂದು ಕೇವಲ ಕೋವಿಡ್ ನಿಂದ ಮಾತ್ರ ಅಲ್ಲ, ಹಸಿವೆಯಿಂದ ಆಕ್ಸಿಜನ್ ಔಷಧಿಗಳ ಕೊರತೆಯಿಂದ ಜನರನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜಕುಮಾರ್ ರಾವ್ ಅವರ ಈಗಿನ ಫೀಸ್ ೧೫ ಕೋಟಿ ರೂಪಾಯಿ?

ಬಾಲಿವುಡ್ ನಲ್ಲಿ ಕೆಲವು ದಿನಗಳಿಂದ ಒಂದು ಚರ್ಚೆ ಕೇಳಿಬರುತ್ತಿದೆ. ನಟ ರಾಜಕುಮಾರ್ ರಾವ್ ಮತ್ತು ಹುಮಾ ಕುರೇಶಿ ಅವರು ನೆಟ್ ಫ್ಲಿಕ್ಸ್ ಗಾಗಿ ’ಮೋನಿಕಾ: ಓಹ್ ಮೈ ಡಾರ್ಲಿಂಗ್’ ಶೀರ್ಷಿಕೆಯ ಫಿಲ್ಮ್ ಗೆ ಸಹಿ ಹಾಕಿದ್ದಾರೆ. ಇದರ ನಿರ್ಮಾಣವನ್ನು ಶ್ರೀರಾಮ್ ರಾಘವನ್ ಮಾಡುತ್ತಿದ್ದಾರೆ.


ಈಗ ಈ ಫಿಲ್ಮ್ ಗಾಗಿ ರಾಜಕುಮಾರ್ ರಾವ್ ಅವರ ಫೀಸ್ ನ್ನು ಮುಂದಿಟ್ಟು ಚರ್ಚೆ ನಡೆಯುತ್ತಿದೆ. ವರದಿಯನ್ನು ನಂಬುವುದಾದರೆ ಬ್ಯಾಕ್ ಟು ಬ್ಯಾಕ್ ಯಶಸ್ವಿ ಫಿಲ್ಮ್ ಗಳನ್ನು ನೀಡುತ್ತಿರುವ ರಾಜಕುಮಾರ್ ತಮ್ಮ ಫೀಸನ್ನು ಹೆಚ್ಚಿಸಿದ್ದಾರೆ, ಹಾಗೂ ಈ ಫಿಲ್ಮ್ ಗಾಗಿ ೧೫ ಕೋಟಿ ರೂಪಾಯಿ ಚಾರ್ಜ್ ಮಾಡಿರುವುದಾಗಿ ಹೇಳಲಾಗಿದೆ.
ರಾಜಕುಮಾರರ ಅನ್ಯ ಫಿಲ್ಮ್ ಗಳನ್ನು ಹೇಳುವುದಾದರೆ ’ಹಮ್ ದೋ ಹಮಾರೇ ದೋ’ ಮತ್ತು “ಬಧಾಯೀ ದೋ’ ಸೇರಿವೆ.