ಸಲಿಂಗ ಕಾಮಿ ಮಾನ್ಯಕ್ಕೆ ಸುಪ್ರೀಂಗೆ ಮೊರೆ

ನವದೆಹಲಿ,ನ.೨೫- ಸಲಿಂಗ ವಿವಾಹವನ್ನು ಮಾನ್ಯ ಮಾಡುವಂತೆ ಸಲಿಂಗಕಾಮಿ ದಂಪತಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಮತ್ತು ತಮ್ಮ ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಲು ಅನುವು ಮಾಡಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸಲಿಂಗಕಾಮಿ ದಂಪತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎಲ್ ಜಿ ಬಿಟಿಕ್ಯೂ ಸಮುದಾಯದ ಸದಸ್ಯರು ತಮ್ಮ ಆಯ್ಕೆಯ ಯಾವುದೇ ವ್ಯಕ್ತಿಯನ್ನು ಮದುವೆಯಾಗಲು ಅನುಮತಿಸುವ ಕಾನೂನು ಚೌಕಟ್ಟಿನಲ್ಲಿ ಅವಕಾಶ ನೀಡಬೇಕು ಎಂದು ತಿಳಿಸಲಾಗಿದೆ.

ಅರ್ಜಿಯಲ್ಲಿ ದಂಪತಿಗಳು ತಮ್ಮ ಆಯ್ಕೆಯ ಯಾವುದೇ ವ್ಯಕ್ತಿಯನ್ನು ಮದುವೆಯಾಗಲು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಅವಕಾಶ ಮಾಡಿಕೊಡಬೇಕು. ಶಾಸಕಾಂಗ ಮತ್ತು ಜನಪ್ರಿಯ ಬಹುಮತದ ತಿರಸ್ಕಾರದಿಂದ ಪ್ರತ್ಯೇಕಿಸಲ್ಪಡಬೇಕು ಎಂದು ಮನವಿ ಮಾಡಲಾಗಿದೆ.

ಅರ್ಜಿದಾರರು, ಪರಸ್ಪರ ಮದುವೆಯಾಗಲು ತಮ್ಮ ಮೂಲಭೂತ ಹಕ್ಕನ್ನು ಪ್ರತಿಪಾದಿಸಿದರು ಮತ್ತು ಈ ನ್ಯಾಯಾಲಯದಿಂದ ಸೂಕ್ತ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಆರ್ಟಿಕಲ್ ೩೨ ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಲಾಗಿದ್ದು ಸಲಿಂಗಕಾಮಿಗಳ ಹಿತಾಸಕ್ತಿ ಕಾಪಾಡುವ ಕಾಯ್ದೆಯಾಗಿದೆ.