
ಬೆಂಗಳೂರು, ಮಾ.6- ಚಂದ್ರಲೇಔಟ್‌ನ ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿಯ ಮನೆಯಲ್ಲಿ ಕೆಲ ದಿನಗಳ ಹಿಂದೆ
ಜಾಹೀರಾತು ಪ್ರಿಂಟಿಂಗ್ ಏಜೆನ್ಸಿ ಮಾಲೀಕರೊಬ್ಬರನ್ನು ಬರ್ಬರವಾಗಿ ಕೊಲೆ ನಡೆದಿರುವುದು ಸಲಿಂಗ ಕಾಮದ ವಿಚಾರಕ್ಕೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಸಲಿಂಗಕಾಮಿಯಾಗಿದ್ದ ಚಂದ್ರ ಲೇಔಟ್ ನ ಮೊದಲ ಹಂತದ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ಲಿಯಾಖತ್ ಅಲಿಖಾನ್ (44)ನನ್ನು ಇಲಿಯಾಸ್ ಕೊಲೆಗೈದಿದ್ದು ಆತನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷಗಳಿಂದ ಲಿಯಾಕತ್ ಮತ್ತು ಇಲಿಯಾಸ್ ಇಬ್ಬರೂ ಸಲಿಂಗಕಾಮದಲ್ಲಿ ತೊಡಗಿದ್ದರು. ಕೊಲೆಯಾದ ಎರಡು ದಿನಗಳ ಹಿಂದೆ ಲಿಯಾಕತ್ ಅಲಿಖಾನ್ ಎರಡನೇ ಮದುವೆಯಾಗಿದ್ದ.
ಆದರೆ ಲಿಯಾಕತ್ ಜೊತೆ ಇದ್ದ ಸಂಬಂಧದಿಂದಾಗಿ ಇಲಿಯಾಸ್ ಎಂಗೇಜ್‌ಮೆಂಟ್ ಕ್ಯಾನ್ಸಲ್ ಮಾಡಿದ್ದ.
ಇತ್ತೀಚೆಗೆ ಇಲಿಯಾಸ್‌ಗೆ ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದರು. ತನ್ನ ಸಲಿಂಗಕಾಮದ ಬಗ್ಗೆ ಮನೆಯವರಿಗೆ ಗೊತ್ತಾದರೆ ಏನು ಗತಿ ಎಂದು ಇಲಿಯಾಸ್ ಚಿಂತೆಯಲ್ಲಿದ್ದ.
ಇದೇ ವಿಚಾರವಾಗಿ ಲಿಯಾಕತ್ ಜೊತೆ ಜಗಳ ಮಾಡಿಕೊಂಡಿದ್ದು ಕೊಲೆಯಾಗುವ ಮುನ್ನವೂ ಸಮಯದಲ್ಲೂ ಇಬ್ಬರೂ ಸಲಿಂಗ ಸೆಕ್ಸ್‌ನಲ್ಲಿದ್ದರು.
ಇಲಿಯಾಸ್ ತನ್ನ ಭವಿಷ್ಯದ ವಿಚಾರವಾಗಿ ಲಿಯಾಕತ್ ಜೊತೆ ಗಲಾಟೆ ತೆಗೆದಿದ್ದ. ಈ ವೇಳೆ ಸುತ್ತಿಗೆಯಲ್ಲಿ ಲಿಯಾಕತ್ ತಲೆಗೆ ಹೊಡೆದು, ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಇಲಿಯಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ನಿಂಬರಗಿ ತಿಳಿಸಿದರು.