ಸರ್ ಸಿದ್ದಪ್ಪ ಕಂಬಳಿ ಪುಣ್ಯಸ್ಮರಣೆ

ಧಾರವಾಡ,ಎ.27: ಅಂದಿನ ಮುಂಬೈ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ. ಕರ್ನಾಟಕ ಏಕೀಕರಣ ಪರಿಷತ್ತಿನ ಮೊದಲ ಮತ್ತು ದ್ವಿತೀಯ ಅಧಿವೇಶನದ ಅಧ್ಯಕ್ಷರಾಗಿದ್ದ ಸರ್. ಸಿದ್ದಪ್ಪ ಕಂಬಳಿ ಅವರ 62ನೇ ಪುಣ್ಯತಿಥಿಯ ಅಂಗವಾಗಿ ಸರ್ ಸಿದ್ದಪ್ಪ ಕಂಬಳಿ ಪ್ರತಿμÁ್ಠನ,ಧಾರವಾಡ ಮತ್ತು ಕರ್ನಾಟಕ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪದಾಧಿಕಾರಿಗಳು ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಸಿದ್ದಪ್ಪ ಕಂಬಳಿ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಎಸ್ ಬೆಲ್ಲದ ಮಾತನಾಡಿ ಕಂಬಳಿ ಅವರು ಉತ್ತರ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ ಮಾಹಾನ ತಜ್ಞರು ಹಾಗೂ ಕೆಸಿಡಿಗೆ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಅದಕ್ಕೆ ಪುಣೆಯಿಂದ ಆರ್ಥಿಕ ಸಹಕಾರ ಒದಗಿಸಿ ಕೆಸಿಡಿಯನ್ನು ಇಂದು ಈ ಮಟ್ಟದಲ್ಲಿ ನೋಡಲು ಕಾರಣೀಭೂತರಾದ ಕಂಬಳಿವರ ಪುಣ್ಯತಿಥಿ ಸ್ಮರಣೆ ಸಾರ್ಥಕ ಮತ್ತು ಆದರ್ಶಮಯ ಎಂದು ಹೇಳಿಷರು.
ಕಂಬಳಿ ಪ್ರತಿμÁ್ಠನದ ಅಧ್ಯಕ್ಷರಾದ ಶಂಕರ ಕುಂಬಿ ಮಾತನಾಡಿ ಬ್ರಿಟಿμï ಆಳ್ವಿಕೆ ಕಾಲದಲ್ಲಿ ಮುಂಬೈ ಪ್ರೆಸಿಡೆನ್ಸಿಯಲ್ಲಿ ಹಲವಾರು ಖಾತೆಗಳನ್ನು ನಿಭಾಯಿಸಿದ್ದರು. ಶಿಕ್ಷಣ ಸಚಿವರಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಅವರ ಕಾರ್ಯವನ್ನು ಸ್ಮರಿಸಿದರು..
ಈ ಸಂದರ್ಭದಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ.ಬಿ.ಕರಡೋಣಿ, ಕಲಾ ಸಂಗಮದ ಅಧ್ಯಕ್ಷರಾದ ಪ್ರಭು ಹಂಚಿನಾಳ, ಸಾಹಿತಿಗಳಾದ ಮಾತಾರ್ಂಡಪ್ಪ ಎಮ್ ಕತ್ತಿ, ಕಾಲೇಜಿನಲ್ಲಿ ಉಪನ್ಯಾಸಕರಾದ ಜಗದೀಶ ಗುಡದೂರ, ಪೆÇ್ರೀ.ಸಿ.ಜಿ ಪಾಟೀಲ, ಪೆÇ್ರೀ.ಲೋಗೋ, ಪಿ.ಪಿ ಕುಲಕರ್ಣಿ, ಎಮ್ ಆರ್ ಚೌಹಾಣ್, ಡಾ ಎಸ್ ಆರ್ ಗಣಿ, ಕವಿವ ಸಂಘದ ಸಿಬ್ಬಂದಿಗಳಾದ ಎಸ್.ಐ.ಭಾವಿಕಟ್ಟಿ, ನಾಗರಾಜ ಸವದತ್ತಿ ಮುಂತಾದವರು ಹಾಜರಿದ್ದರು.