
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.06: ಸರ್ ನಮ್ಮ ಓಟು ನಿಮಗೇ …ಹೀಗೆ ಹೇಳಿದ್ದು ಇಲ್ಲಿನ ಹುಸೇನ್ ನಗರದ ಮಾಬುಸಾಬ್
ಎಂದಿನಂತೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಇಂದು ನಗರದ 20 ನೇ ವಾರ್ಡಿನಲ್ಲಿ ಬಿಜೆಪಿಗೆ ಮತ ನೀಡಿ ಎಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದರು.
ಮತದಾರರಿಗೆ ಕೈ ಮುಗಿಯುತ್ತ ತೆರಳುತ್ತಿದ್ದ. ಶಾಸಕರನ್ನು ತಡೆದ ಮಾಬುಸಾಬ್. ಯಾರು ಏನೇ ಹೇಳಲಿ. ನಮ್ಮ ಓಟು ನಿಮಗೇ. ಯಾಕೆಂದರೆ. ಕೊವಿಡ್ ಬಂದಾಗ ಉಪವಾಸ ಅನುಭವಿಸುತ್ತಿದ್ದ ನಮಗೆ ಅಕ್ಕಿ ಬೇಳೆ, ಅಡುಗೆ ಎಣ್ಣೆ ಕೊಟ್ಟು ಒಂದಿಷ್ಟು ದಿನಕ್ಕಾದರೂ ಬದುಕಲು ಸಹಾಯ ಮಾಡಿದ್ದೀರಿ.ನಿಮ್ಮ ಋಣ ತೀರಿಸುವುದಾಗಿ ಹೇಳಿದ ಪ್ರಸಂಗ ನಡೆಯಿತು.
ಆಗ ಶಾಸಕರು ಆಯ್ತು ನಿಮ್ಮ ಆಶಿರ್ವಾದ ದೇವರ ಮೂಲಕ ನಮಗೆ ಇರಲಿ ಎಂದರು.
ನಂತರ ಶಾಸಕರು ಮತ್ತೆ ಕೈಮುಗಿಯುತ್ತ ಓಣಿಯಲ್ಲಿ ಪ್ರಚಾರ ಕಾರ್ಯ ನಡೆಸಿದರು. ಹಲವರು ಹಲವು ರೀತಿಯ ಸ್ವ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಆದಷ್ಟು ಪರಿಹರಿಸುವ ಭರವಶೆ ನೀಡಿದರು.
ಪ್ರಚಾರ ಕಾರ್ಯದಲ್ಲಿ ಪಕ್ಷದ ಸ್ಥಳೀಯ ಮುಖಂಡರುಗಳಾದ ಕೃಷ್ಣ (ಕಿಟ್ಟ), ಬಿ.ಎಸ್.ಪ್ರಭುಕುಮಾರ್, ಜ್ಯೋತಿ ಪ್ರಕಾಶ್, ಜಿ.ವೀರಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ನೂರಾರು ಜನ ಕಾರ್ಯಕರ್ತರು, ಪಕ್ಷದ ಬೆಂಬಲಿಗರು ಇನ್ನಿತರರು ಭಾಗಿಯಾಗಿದ್ದರು.