ಸರ್. ಎಂ.ವಿ.ಯವರ ಜೀವನ ಮೌಲ್ಯ ಅನುಸರಣೆ ಅಗತ್ಯ

ಧಾರವಾಡ,ಸೆ16 : ಸರ್ ಎಂ. ವಿಶ್ವೇಶ್ವರಯ್ಯ ಜೀವನ ಮೌಲ್ಯ, ಅವರ ಬುದ್ಧಿವಂತಿಕೆ, ಶ್ರಮಿಕ ಮನೋಭಾವವನ್ನು ನಾವು ಅದರಲ್ಲೂ ಯುವಜನತೆ ಅನುಸರಿಸಬೇಕಾಗಿದೆ. ರೈತರು, ಕಾರ್ಮಿಕ ವರ್ಗ ಹೊಲದಲ್ಲಿ ಕೆಲಸ ಮಾಡುವ ಶ್ರಮಜೀವಿಗಳು ದೇಶದ ಆರ್ಥಿಕತೆಯನ್ನು ಹೆಚ್ಚಿಸುವವರು, ಸರ್.ಎಂ ವಿಶ್ವೇಶ್ವರಯ್ಯ ಶ್ರಮಜೀವಿಗಳ ಪ್ರತಿನಿಧಿಯಾಗಿದ್ದಾರೆ ಎಂದು ಇಂಜಿನಿಯರ್ ಸಂಜಯ ಕಬ್ಬೂರ ಹೇಳಿದರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಗರದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜನಿಯರ್ಸ, ಲೋಕಲ್ ಸೆಂಟರ್ ಹಮ್ಮಿಕೊಂಡ ಡಾ.ಸರ್.ಎಮ್.ವಿಶ್ವೇಶ್ವರಯ್ಯನವರ ಅವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕವಿವಿಯ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಪಾಟೀಲ, ಅತಿಥಿಗಳಾದ ಕೈಗಾರಿಕಾ ನಿಗಮದ ನಿರ್ದೇಶಕ ರಾಜು ಪಾಟೀಲ ಮಾತನಾಡಿದರು.
ಕಬೀರ ನಧಾಫ್, ಸಿದ್ದನಗೌಡ ಕೆ.ಪಾಟೀಲ, ವಿಜಯೇಂದ್ರ ಪಾಟೀಲ, ಅರುಣ ಶೀಲವಂತ, ವಿಜಯ್ ಹಳ್ಳಿಕೇರಿ, ಅಶೋಕ ಕೌಜಗೇರಿ, ರಾಜು ಇಟಗಿ, ಜುಬೇರ್ ಅಬ್ಬಿಹಾಳ,ಸತ್ಯನಾರಾಯಣ ಸಿಂಗ್,ಸಂಜಯ ಲೋಂಡೆ ಬಸವರಾಜ ಲಂಗೋಟಿ, ಮಂಜುನಾಥ ಸಿಂಪಿಗೇರ, ಬಸವರಾಜ ನರೇಗಲ, ವಿಜಯ ತೋಟಗೇರ, ಶಶಿಧರ ಚಕ್ರವರ್ತಿ, ಅಬುಲ್ ಹಸನ್, ರಿಯಾಜ್ ಕರಿಕಟ್ಟಿ, ಸುಮಿತ್ ಸುಣಗಾರ, ತಾಹೀರ್ ಹುಸೇನ, ದೀಪಕ್ ಕುಲಕರ್ಣಿ, ಸಂಶುದ್ದೀನ ದಿಡಗೂರು, ಪವನ್ ಬೆಟಗೇರಿ ಸೇರಿದಂತೆ ಇತರರು ಇದ್ದರು.