ಸರ್.ಎಂ ವಿಶ್ವೇಶ್ವರಯ್ಯ ಅಮರಶಿಲ್ಪಿ: ವಿಶ್ವಕರ್ಮ

ಕಲಬುರಗಿ:ಸೆ.15: ಸರ್.ಎಂ ವಿಶ್ವೇಶ್ವರಯ್ಯ ಅವರು ಅಮರಶಿಲ್ಪಿಗಳಾಗಿದ್ದಾರೆ ಎಂದು ಶಿಕ್ಷಣತಜ್ಞ ದೇವಿಂದ್ರ ವಿಶ್ವಕರ್ಮ ಹೇಳಿದರು. ಅವರು ಜೇವರ್ಗಿ ನಗರದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಸರ್.ಎಮ್. ವಿಶ್ವೇಶ್ವರಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಆದರ್ಶ ಪ್ರಶಿಕ್ಷಣಾರ್ಥಿ ಶರಣಗೌಡ ಬಂಡಿ ಅವರ ವಿಶೇಷ ಆಹ್ವಾನದ ಮೇರೆಗೆ ಆಗಮಿಸಿ, ವಿಶೇಷ ಉಪನ್ಯಾಸ ನೀಡಿದ ಅವರು ಸರ್.ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಮಾತನಾಡಿದ ಅವರು, ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು. ಸಾಧನೆ ಮಾಡದಿದ್ದರೆ ಬದುಕು ನಿರರ್ಥಕವಾಗುತ್ತದೆ. ಅಂತಹ ಶ್ರೇಷ್ಟ ಸಾಧಕರಾಗಿ, ತಂತ್ರಜ್ಞರಾಗಿ, ಜೀವನದಲ್ಲಿ ಯಶಸ್ಸು ಕಂಡು ಮಹಾನಕಾರ್ಯಗಳನ್ನು ಮಾಡಿ ಇಂದಿಗೂ ಅವರ ಹೆಸರು ಅಜರಾಮರವಾಗಿದ್ದು, ಅಂತಹ ವ್ಯಕ್ತಿತ್ವವನ್ನು ಸರ್.ಎಂ ವಿಶ್ವೇಶ್ವರಯ್ಯ ಅವರು ಪಡೆದಿದ್ದರು ಎಂದರು. ಕರ್ನಾಟಕ ನಿರ್ಮಾಣದ ಮಹತ್ವದ ಪಾತ್ರ ವಹಿಸಿರುವ ಮಹಿನಿಯರಲ್ಲಿ ಅಗ್ರ ಸಾಲಿನಲ್ಲಿರುವವರು ಸರ್.ಎಂ ವಿಶ್ವೇಶ್ವರಯ್ಯ ಅವರು ಅನೇಕ ಕಾರಣಗಳಿಗಾಗಿ ಪ್ರಾತಸ್ಮರಣಿಯರು. ಒಬ್ಬ ವಾಸ್ತು ಶಿಲ್ಪಿಯಾಗಿ ಬುದ್ದಿವಂತಿಕೆ, ಒಬ್ಬ ಪ್ರಾಮಾಣಿಕ ದಿವಾನರಾಗಿ ಅವರ ಆಡಳಿತ, ಒಬ್ಬ ನೇರ ನುಡಿಯ ವ್ಯಕ್ತಿಯಾಗಿ ಅವರ ಶಿಸ್ತು ಹಾಗೂ ಪ್ರಾಮಾಣಿಕತೆ. ಅತೀ ಬಡತನದಿಂದ ಬಂದು ಸಾಧನೆಯ ಶಿಖರವನ್ನು ನೇರಿದ ಸಾಧಕರು. ಅನೇಕ ಅಡತಡೆಗಳು ಬಂದರು ಅದನ್ನು ಎದುರಿಸಿ ಸಾಧಿಸಿದ ಛಲ ಹಾಗೂ ಇಷ್ಟೇಲ ಸಾಧಿಸಿಯು ಏನನ್ನು ಬಯಸದ ನಿಸ್ವಾರ್ಥತೆ. ಹೀಗೆ ಯಾವ ಅಂಶವನ್ನು ತಗೆದುಕೊಂಡರು ಅವರು ಮಾದರಿಯಾಗಿ ನಿಲ್ಲುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶರಣಗೌಡ ಬಂಡಿ, ಹಿರಗಪ್ಪ, ರಮೇಶ ದೇಸಾಯಿ, ವೀರೇಶ್, ಪ್ರಿಯಾಂಕಾ, ನಾಗಮ್ಮ ಸೇರಿ ಮುಂತಾದವರು ಹಾಜರಿದ್ದರು.