ಸರ್ವೋತ್ತಮ ಪ್ರಶಸ್ತಿ ಪ್ರಕಟ

ಬೆಂಗಳೂರು, ಏ. ೨೪- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಸಾಧನೆಗೈದ ಅರ್ಹ ಅಧಿಕಾರಿಗಳಿಗೆ ನೀಡುವ ಸರ್ವೋತ್ತಮ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ.
ಈ ವರ್ಷ ೧೦ ಮಂದಿ ಈ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಪ್ರಶಸ್ತಿ ೨೫ ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ.
ಸರ್ಕಾರದ ಉಪಕಾರ್ಯದರ್ಶಿ ಆರ್.ಚಂದ್ರಶೇಖರ್, ಕೆಎಸ್‌ಆರ್‌ಟಿಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಟಿ.ಎಸ್. ಲತಾ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಂಗಾರಾಮ್, ದಾವಣಗೆರೆ ತಹಶೀಲ್ದಾರ್ ಬಿ.ಎನ್. ಗಿರೀಶ್, ಅಬಕಾರಿ ಉಪ ಆಯುಕ್ತ ಬಸವಲಿಂಗಯ್ಯ ಆರ್. ಹಿರೇಮಠ್, ಪ್ರಥಮ ದರ್ಜೆ ಸಹಾಯಕ ಜಿ. ಹರ್ಷ, ಶುಶ್ರೂತ ಅಧಿಕಾರಿ ಹೆಚ್.ಪಿ. ಹೇಮಾವತಿ, ಹಿರಿಯ ಆರೋಗ್ಯ ಸಹಾಯಕ ಎಂ. ಆಂಜನೇಯ, ಶುಶ್ರೂತ ಅಧೀಕ್ಷಕರಾದ ಚಂದ್ರಮತಿ ಎಂ. ಹೆಗಡೆ, ಉಪನಿರ್ದೇಶಕ ಚಂದ್ರಶೇಖರ್ ನಾಯಕ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.