ಸರ್ವೋಚ್ಛ ನ್ಯಾಯಲಯ ತೀರ್ಪು ನಿರಾಶಾದಾಯಕ

?

ವಾಡಿ:ಜ.14: ಜನರಿಗೆ ಮಾರಕವಾಗಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಾಗೂ ವಿಧ್ಯುಚ್ಛಕ್ತಿ ತಿದ್ದುಪಡಿಯ ಕಾಯಿದೆ ವಾಪಸ್ಸು ಪಡೆಯಲು ದೇಶದ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ವೋಚ್ಛ ನ್ಯಾಯಲಯ ನೀಡಿರುವ ತೀರ್ಪು ನಿರಾಶದಾಯಕವಾಗಿದ್ದು, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದು ಎಸ್‍ಯುಸಿಐ ವಾಡಿ ಕಾರ್ಯದರ್ಶಿ ಆರ್.ಕೆ ವೀರಭದ್ರಪ್ಪ ಅಭಿಪ್ರಾಯಿಸಿದ್ದಾರೆ.
ಈ ಕುರಿತು ಪತಿಕಾ ಹೇಳಿಕೆ ನೀಡಿರುವ ಅವರು ತಮ್ಮ ಹೋರಾಟವನ್ನು ಮುಂದುವೆಸುವ ರೈತರ ತೀರ್ಮಾನಕ್ಕೆ ಎಸ್‍ಯುಸಿಐ ಬೆಂಬಲ ವ್ಯಕ್ತಪಡಿಸುತ್ತಾ, ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೋರೇಟ್ ಸೇವೆಗೈಯುವ ನೀತಿಗಳನ್ನು ಸೋಲಿಸಲು ದೇಶದ ಮಿಲಿಯಾಂತರ ಶೋಷಿತ ಜನತೆ ಮುಂದಾಗಬೇಕು ಎಂದು ಎಸ್‍ಯುಸಿಐ ಪಕ್ಷ ಕರೆ ನೀಡಿದೆ.