ಸರ್ವೆ ನಂ ೩೩೮ ರಲ್ಲಿ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಮನವಿ

ರಾಯಚೂರು,ಆ.೫, ಚಂದ್ರಬಂಡಾ ಹೋಬಳಿಯ ಆತ್ಕೂರು ಗ್ರಾಮದ ಸರ್ವೆ ನಂ ೩೩೮ ವಿಸ್ತೀರ್ಣ ೨೦೩ ಎಕರೆ ೩೬ ಗುಂಟೆ ಪೋಟ್ ಖರಾಬ್ ಆಗಿದ್ದು ಇದನ್ನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಭೂಮಿ ವಸತಿ ಹೋರಾಟ ಸಮತಿ ಪದಾಧಿಕಾರಿಗಳು ಗ್ರೇಡ್ ೨ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಸಿದರು.
ಚಂದ್ರಬಂಡಾ ಹೋಬಳಿಯ ಆತ್ಕೂರು ಗ್ರಾಮದ ಸರಕಾರಿ ಭೂಮಿ ಸರ್ವೆ ನಂ ೩೩೮, ವಿಸ್ತೀರ್ಣ ೨೦೩ ಎಕರೆ ೩೬ ಗುಂಟೆ ಈ ಜಮೀನಿನಲ್ಲಿ ಅನೇಕ ವರ್ಷಗಳಿಂದ ಭೂಹೀನ ಕುಟುಂಬಗಳು ಸಾಗುವಳಿ ಮಾಡುತ್ತಿದ್ದಾರೆ. ಕೆಲವರಿಗೆ ಪಟ್ಟಾ ಆಗಿವೆ. ಪಟ್ಟಾ ಆಗದಿರುವ ರೈತರು ಸಕ್ರಮಕ್ಕಾಗಿ ಫಾರಂ ನಂ ೫೭ ಅರ್ಜಿಯನ್ನು ಸಲ್ಲಿಸಲು ನಾಡ ಕಚೇರಿ ತೆರಳಿದಾಗ ತಂತ್ರಾಂಶದಲ್ಲಿ ಆಪಲೋಡ್ ಆಗುತ್ತಿಲ್ಲ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ರೈತರು ಅರ್ಜಿಯಿಂದ ಅವಕಾಶ ವಂಚಿತರಾಗುತ್ತಿದ್ದಾರೆ.
ಒಟ್ಟು ವಿಸ್ತೀರ್ಣದಲ್ಲಿ ಪೋಟ್ ಖರಾಬ್ ಅ ಆಗಿದ್ದು ಪೋಟ್ ಖರಾಬ್ ಬ ದಲ್ಲಿ ಎಕರೆ ಗುಂಟೆ ತೋರಿಸದೆ ಇದ್ದ ಕಾರಣ ತಂತ್ರಾಂಶದಲ್ಲಿ ಅಪಲೋಡ್ ಆಗುತ್ತಿಲ್ಲ ಇದಕ್ಕೆ ಸಂಬಂಧಿಸಿ ಅನೇಕ ಭಾರಿ ತಿದ್ದುಪಡಿ ಮಾಡಿಕೊಡುವಂತೆ ತಾಲ್ಲೂಕ ಆಡಳಿತಕ್ಕೆ ಮನವಿ ಮಾಡಿಕೊಂಡರು ಗಮನ ಹರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಇದರಿಂದ ಮತ್ತೊಂದು ಭಾರಿ ರೈತರು ತಾಲ್ಲೂಕ ಆಡಳಿತಕ್ಕೆ ಮನವಿ ಮಾಡಿ ಸರಕಾರ ಸಕ್ರಮಕ್ಕಾಗಿ ಅರ್ಜಿಯನ್ನು ಸುವರ್ಣ ಅವಕಾಶವನ್ನು ಕಲ್ಪಿಸಿದ್ದಾರೆ ಎಂದರು.
ಈ ಸಮಸ್ಯೆಯನ್ನು ಕೂಲಂಕುಶವಾಗಿ ಚರ್ಚಿಸಿ ಪಹಣಿಯಲ್ಲಿ ಎಕರೆ ಗುಂಟೆಯನ್ನು ತಿದ್ದುಪಡಿ ಮಾಡಿ ಕೊಡಬೇಕು ಒಂದು ವೇಳೆ ನಿರ್ಲಕ್ಷ ಮಾಡಿದ್ದಲ್ಲಿ ಭೂ-ಹೀನ ಕುಟುಂಬಸ್ಥರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾರೆಪ್ಪ ಹರವಿ, ಅಂಜಿನಯ್ಯ ಕುರುಬದೊಡ್ಡಿ, ನರಸಿಂಹ ಕುರುಬದೊಡ್ಡಿ ಹಾಗೂ ರಂಗಾರೆಡ್ಡಿ ಸೇರಿದಂತೆ ಉಪಸ್ಥಿತರಿದ್ದರು.