ಸಮೀಕ್ಷೆಗಳಲ್ಲಿ ಕೈಗೆ ಹಿನ್ನಡೆ

ಹುಬ್ಬಳ್ಳಿ, ಏ. ೧೬: ಎಲ್ಲ ಸರ್ವೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಹೀಗಾಗಿ ಕಾಂಗ್ರೆಸ್ ಹತಾಶೆಗೊಂಡು ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾಚಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಸರ್ವೆಗಳಲ್ಲಿ ಎರಡು ಮೂರು ಸ್ಥಾನ ಗೆದ್ದರೆ ಹೆಚ್ಚು ಎಂದಿದೆ. ಹೀಗಾಗಿ ಕಾಂಗ್ರೆಸ್ ಹತಾಶೆಗೊಂಡು ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.ಯಾರು ಗಲಾಟೆ ಮಾಡುತ್ತಾರೆ. ಯಾರು ಧಿಕ್ಕಾರ ಕೂಗುತ್ತಾರೆ ಅವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ದೇವೆಗೌಡರು ಅತ್ಯಂತ ಹಿರಿಯ ಜೀವಿ. ಅವರು ಕರ್ನಾಟಕದ ಏಕೈಕ ಪ್ರಧಾನಿ. ಅವರನ್ನು ತುಚ್ಛ ಭಾಷೆಯಲ್ಲಿ ಮಾತನಾಡಿಸುತ್ತಿದ್ದಾರೆ. ನಾನು ಇದನ್ನು ಖಂಡಸುತ್ತೇನೆ ಎಂದವರು ನುಡಿದರು.ಹೆಚ್.ಡಿ.ಕುಮಾರಸ್ವಾಮಿ ಅವರು ೧೦೦೦ ಎಕರೆ ಆಸ್ತಿ ಮಾಡಿದರೇ, ಅವರ ಜೊತೆ ಕಾಂಗ್ರೆಸ್‌ನವರು ಏಕೆ ಸರ್ಕಾರ ಮಾಡಬೇಕಿತ್ತು? ಎಂದು ಅವರು ಪ್ರಶ್ನಿಸಿದರು.