ಸರ್ವಾಧಿಕಾರಿ ಧೋರಣೆ ಖಂಡಿಸಿ ಮನವಿ

ಔರಾದ :ಏ.7: ಫೆಬ್ರುವರಿ ತಿಂಗಳಲ್ಲಿ ತಾಲೂಕಿನ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಸಮಾಜದ ದಲಿತ ಮುಖಂಡ ಬಂಟಿ ದರ್ಬಾರೆ ಅವರು ಸಿ.ಆರ್.ಪಿ.ಸಿ 160ರ ಅಡಿಯಲ್ಲಿ ದೂರು ಬರೆದು ಕೊಟ್ಟಿರುತ್ತಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬಂಟಿ ದರ್ಬಾರೆ ಅವರಿಗೆ ಭಾಲ್ಕಿ ಡಿಎಸ್ಪಿ ದೇವರಾಜ ಅವರು ವಿಚಾರಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿರುತ್ತಾರೆ. ಈ ರೀತಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಕೂಡಲೇ ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು ಪ್ರಭಾವಿ ರಾಜಕೀಯ ವ್ಯಕ್ತಿಗಳ ಪ್ರಭಾವಿತರಾಗಿ ಹೀಗೆ ವರ್ತಿಸಿದ್ದಾರೆ ಎಂದು ಆರೋಪಿಸಿ ಚಿಂತಾಕಿ ಹೋಬಳಿಯ ಹೊಲಿಯ ಮತ್ತು ಮಾದಿಗ ಸಮುದಾಯದ ಕಾರ್ಯಕರ್ತರು ನಾಡ ಕಚೇರಿಯ ಮೂಲಕ ತಹಸೀಲ್ದಾರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಲಿವಾನ ಸೂರ್ಯವಂಶಿ, ಗುಂಡುಕುಮಾರ, ರಾಹುಲ್, ಏಸಪ್ಪ, ಲೋಕೇಶ್, ಮಿಲೀಂದ, ಸಚಿನ್, ಅಗಷ್ಟೀನ್, ಶಿರೋಮಣಿ ಜಾನ್ಸನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.