
ಪಾಟಿಯಾಲ, ಏ. 1- ದೇಶದಲ್ಲಿ ಯಾವಾಗಲೆಲ್ಲಾ ಸರ್ವಾಧಿಕಾರ ಬಂದಿದೆಯೋ ಅದರ ಜೊತೆಯೂ ಕ್ರಾಂತಿಯೂ ಬಂದಿದೆ. ಈ ಬಾರಿ ಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ ಎಂದು ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ದೇಶದಲ್ಲಿ ತಲೆ ಎತ್ತಿರುವ ಸರ್ವಾಧಿಕಾರಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿ ತಕ್ಕ ತಿರುಗೇಟು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪರೋಕ್ಷ ವಾಗ್ಸಾಳಿ ನಡೆಸಿದ್ದಾರೆ.
ರಸ್ತೆ ಅಪಘಾತ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಒಂದು ತಿಂಗಳು ಮುನ್ನವೇ ಪಂಜಾಬ್ ನ ಪಾಟಿಯಾಲ ಜೈಲಿನಿಂದ ಬಿಡುಗೆಯಾಗ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿರುವ ಕ್ರಮದ ಹಿಂದೆ ಸರ್ವಾಧಿಕಾರದ ಕರಿ ನೆರಳಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಿಯೊಂದರಲ್ಲಿ ಪಿತೂರಿ:
ದೇಶದಲ್ಲಿ ಪಿತೂರಿ ರಾಜಕಾರಣ ನಡೆಯಿತ್ತಿದೆ. ಪ್ರಜಾಪ್ರಭುತ್ಬ ಇಲ್ಲದಾಗಿದೆ ಎಂದು ಎಂದು ಸಿಧು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.ಪಂಜಾಬ್ ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಹುನ್ನಾರ ನಡೆದಿದೆ. ಒಂದು ವೇಳೆ ಪಂಜಾಬ್ ರಾಜ್ಯವನ್ನು ದುರ್ಬಲ ಮಾಡಿದರೆ ನೀವು ದುರ್ಬಲರಾಗಿತ್ತೀರ ಎಂದು ಆರೋಪ ಮಾಡಿದ್ದಾರೆ.
ಬಿಡುಗಡೆಗೆ ವಿಳಂಬ:
ಪಾಟಿಯಾಲ ಜೈಲಿನಿಂದ ಮದ್ಯಾಹ್ನವೇ ಬಿಡುಗಡೆಯಾಗಿದರೂ ಮಾದ್ಯಮದವರು ಹೊರ ಹೋಗಲಿ ಎನ್ನುವ ಕಾರಣಕ್ಕೆ ಸಂಜೆ ತನಕ ಬಿಡುಗಡೆ ಮಾಡದೆ ಜೈಲಿನಲ್ಲಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.