ಸರ್ವಶ್ರೇಷ್ಟ ಅಕ್ಷರ ಜ್ಞಾನ ಬಹು ಮುಖ್ಯ :ಶ್ರೀಗಳು

ಶಹಾಪುರ:ನ.18:ಮಾನವ ತನ್ನ ಜೀವನವನ್ನು ಸುಖ ಸಂತೋಷದಿಂದಿರಲು ಶಿಕ್ಷಣದ ಅವಶ್ಯಕತೆ ಹೆಚ್ಚು. ಮನುಷ್ಯ ಶಿಕ್ಷಣವಂತನಾದರೆ ಜ್ಞಾನಿಯಾಗಬಹುದು ಬದುಕಿಗೆ ಜ್ಞಾನÀ ಅವಶ್ಯಕವಾಗಿದ್ದು, ಸಕಲ ಜ್ಞಾನಗಳಲ್ಲಿ ಅಕ್ಷರ ಜ್ಞಾನ ಸರ್ವ ಶ್ರೇಷ್ಟ ಮತ್ತು ಮುಖ್ಯವಾದದ್ದು ಎಂದು ಷ,ಬ್ರ, ಪೂಜ್ಯ ಮಡಿವಾಳೇಶ್ವರ ಶಿವಾಚಾರ್ಯಮಾಹಾಸ್ವಾಮಿಗಳು ತಿಳಿಸಿದರು.

ತಾಲೂಕಿನ ಸಗರ ಗ್ರಾಮದ ಗ್ರಾಮ ಪಂಚಾಯತಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಎರ್ಪಡಿಸಲಾದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಪ್ರಪಂಚ ಅಕ್ಷರ ಜಾÐನz ಸಹಾಯದಿಂದÀ ಅಕ್ಷರದಿಂದ ಸರ್ವ ಜಗತ್ತು ಕಾಣಲು ಸಾಧ್ಯವೆಂದು ಅವರು ನುಡಿದರು.

ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ, ಷ.ಬ್ರ ಸೋಮೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು, ಗ್ರಂಥ ಬಂಡಾರಗಳಿಂದ ಪೃಕೃತಿಯ ಸ್ವರೂಪ ಅರಿತುಕೊಳ್ಳಲು ಸಾಧ್ಯವಾಗಿದೆ. ರಾಜ ಮಾಹಾರಾಜರು, ಋಷಿಮುನಿಗಳು ತಮ್ಮ ಮಹಾತಪಸ್ವಿತನಗಳಿಂದ ಅನೇಕ ಮಹಾ ವಿದ್ಯೆಯನ್ನು ಪಡೆದು ಮುಕ್ತಿ ಪಡೆದಿದ್ದಾರೆ. ಅವರ ಜೀವನ ಚಿರಿತ್ರೆಗಳನ್ನು ಮತ್ತು ಹಿಂದಿನ ಮಹತ್ವಕಾಂಕ್ಷಿ ವರ್ತಮಾನದಿಗಳನ್ನು, ಅರಿತುಕೊಳ್ಳಲು ಅಕ್ಷರ ಅರಿವು ಅಗತ್ಯವಾಗಿದೆ. ಗ್ರಾಮ ಪಂಚಾಯತಿಯಲ್ಲಿರುವ ಈ ಗ್ರಂಥ ಬಂಡಾರವನ್ನು ಸರ್ವರು ಸದುಪಯೋಗಪಡಿಸಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.

ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳಾದ ಅಣ್ಣಾರಾವ್, ಕಾರ್ಯದರ್ಶಿಗಳಾದ ಕಾಳಪ್ಪ ಬಡಿಗೇರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಗ್ರಂಥಪಾಲಕರಾದ ಚಂದ್ರಗಿರಿ ಹತ್ತಿಗೂಡುರ, ನಿಂಗಣ್ಣ ಕನ್ಯಾಕೊಳೂರ, ಮಾಳಿಂಗರಾಯ ಕೊಂಕಲ್, ಹಣಮಂತ್ರಾಯ ಟಿ,ವಡಗೇರಾ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಂಥಪಾಲಕರು, ಓದುಗರು, ಅಧಿಕಾರಿಗಳು ಹಾಜರಿದ್ದರು.

ಗ್ರಂಥಪಾಲಕರಾದ ವಿಶ್ವರಾಧ್ಯ ಎಸ್.ದೇಸಾಯಿ ಸ್ವಾಗತಿಸಿದರು. ವೀರೇಶ ದೇಸಾಯಿ ಸರ್ವರನ್ನು ವಂದಿಸಿದರು.