ಸರ್ವರ ಹಿತ ಕಾಪಾಡುತ್ತಿರುವ ಮೋದಿ ಸರಕಾರ: ಸಚಿವ ಖೂಬಾ

ಬೀದರ,ಜ.19: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಅರಣಕಲ್ ಗ್ರಾಮದಲ್ಲಿ ಆಯೋಜಿಸಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಮೋದಿ ಸರ್ಕಾರ ದೇಶದ ರೈತರ, ಯುವಕರ, ಮಹಿಳೆಯರ ಎಲ್ಲರ ಹಿತ ಕಾಪಾಡುತ್ತಿದೆ ಎಂದು ತಿಳಿಸಿದರು. ಆದರೆ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರನ್ನು ಜನರನ್ನು ಕತ್ತಲೆಗೆ ತಳ್ಳಿದೆ ಎಂದು ಆರೋಪಿಸಿದರು.
ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಚಿತ್ರಣ ಬದಲಾಗಿದೆ, ಬಡವರ ಸರ್ಕಾರವಾಗಿ ಹೊರಹೊಮ್ಮಿದೆ, ದೇಶದ ಪ್ರತಿಯೊಬ್ಬ ಬಡವ ನಮ್ಮ ಸರ್ಕಾರದಿಂದ 3 ರಿಂದ 4 ಯೋಜನೆಗಳ ಲಾಭಗಳು ಪಡೆದುಕೊಂಡಿದ್ಧಾರೆ, ದೇಶದಲ್ಲಿ 81ಕೋಟಿ ಜನರಿಗೆ ನಮ್ಮ ಸರ್ಕಾರದ ಲಾಭಗಳು ಮುಟ್ಟಿವೆ, 13 ಕೋಟಿ ಹೆಚ್ಚಿನ ಜನ ಬಡತನದಿಂದ ಮೇಲೆ ಬಂದಿದ್ದಾರೆ ಎಂದು ತಿಳಿಸಿ, ಮೋದಿ ಸರ್ಕಾರದ ಸಾಧನೆ ತಿಳಿಸಿದರು.ಆದರೆ ಕಾಂಗ್ರೇಸ್ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ, ನಮ್ಮ ಮೋದಿ ಸರ್ಕಾರದ ಯೋಜನೆಗಳು ಜನರಿಗೆ ತಲುಪದ ಹಾಗೆ ಮಾಡುತ್ತಿದೆ. ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಗುಡುಗಿದರು.ಸುಳ್ಳು ಗ್ಯಾರಂಟಿಗಳು ನೀಡಿ ಜನರಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.ನಂತರ ಮೋದಿಯವರು ಲಾಭಾರ್ಥಿಗಳನ್ನು ಉದ್ದೇಶಿಸಿ ಮಾಡಿರುವ ಭಾಷಣವನ್ನು ಜನರೊಂದಿಗೆ ಕುಳಿತು ವಿಕ್ಷಿಸಿದರು, ಉಜ್ವಲ್ ಯೋಜನೆಯಡಿ ಗ್ಯಾಸ್, ಅಂಚೆ ಇಲಾಖೆಯ ಖಾತೆ ಪುಸ್ತಕ, ಬ್ಯಾಂಕ ಚೆಕಗಳು ಲಾಭಾರ್ಥಿಗಳಿಗೆ ವಿತರಿಸಿದರು.ಈ ಸಂದರ್ಭದಲ್ಲಿ ಅರಣಕಲ್ ಗ್ರಾಮ ಪಂಚಾಯತ ಅಧ್ಯಕ್ಷೆ ನಾಗಮಣಿ ರಾಠೋಡ, ಉಪಾಧ್ಯಕ್ಷ ಗುಂಡಪ್ಪ ರಟಕಲ್, ಬಿಜೆಪಿ ಮುಖಂಡರಾದ ಸಂತೋಷ ಗಡಂತಿ, ಮೋತಿರಾಮ ಚಿಮ್ಮನಚೋಡ, ವಿಜಯಕುಮಾರ ಚೆಂಗಟಾ, ರಾಮು ರಾಠೋಡ, ಶಿವರಾಜ ಪಾಟೀಲ್ ಗೊಣಗಿ, ಶಿವರಾಜ ಪಾಟೀಲ್ ಅರಣಕಲ್, ರೇವಣಸಿದ್ದ ಬಡಾ, ರವಿಪಾಟೀಲ್, ಶರಣಗೌಡ ಕಂದಗೂಳ, ಸಿದ್ದುಪಾಟೀಲ್, ರವಿಸಿಂಗೆ, ಶಿವಕುಮಾರ ಪಾಟೀಲ್ ಹೇರೂರ, ಸಿದ್ದು ಮಾನಕಾರ ಅಧಿಕಾರಿಗಳಾದ ರವಿ ಸುಬ್ರಹ್ಮಣ್ಯ, ಲೋಹಿತ್, ಶಿವಕುಮಾರ, ಗೋಪಾಲ ಕುಲಕರ್ಣಿ ಇತರರು ಉಪಸ್ಥಿತರಿದ್ದರು.
ರೇವಗ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮುಖಂಡರು, ನಮೋ ನವ ಮತದಾನದ ಅಭಿಯಾನದ ಅಂಗವಾಗಿ, ಹೊಸ ಮತದಾರರಿಗೆ ನೊಂದಣಿ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು ಹಾಗೂ ಮತದಾನದ ಮಹತ್ವದ ಬಗ್ಗೆ ಯುವ ಮತದಾರರಿಗೆ ತಿಳಿಸಿ, ಜಾಗೃತಿಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದರು. ಹೊಸ ಮತದಾರರು 7820078200 ಸಂಖ್ಯೆಗೆ ಮಿಸ್ ಕಾಲ್ ಮಾಡಿ ನೋಂದಣಿ ಮಾಡಬಹುದು ಅಥವಾ ವೆಬ್ ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಎಲ್ಲಾ ಯುವ ಮತದಾರರಿಗೆ ತಿಳಿಸಿದರು.