ಸರ್ವರ ಸಹಕಾರದಿಂದ ಅನಿಷ್ಟ ಪದ್ಧತಿಗೆ ಅಂತ್ಯ ಹಾಡಬೇಕಿದೆ – ರಾಮಾಂಜನೇಯ.

ಸಂಜೆವಾಣಿ ವಾರ್ತೆಕೂಡ್ಲಿಗಿ. ಆ 19 :- ಸರ್ವರ ಸಹಕಾರದಿಂದ ದೇಶದ ಅನಿಷ್ಟ ಪದ್ಧತಿ ಹಾಗೂ ಮೂಢನಂಬಿಕೆಗಳಿಗೆ ಅಂತ್ಯ ಹಾಡಬೇಕಿದೆ ಎಂದು ಕೂಡ್ಲಿಗಿ ಸ್ನೇಹ ಸಂಸ್ಥೆಯ ನಿರ್ದೇಶಕ ರಾಮಾಂಜನೇಯ ತಿಳಿಸಿದರು.ಅವರು ತಾಲೂಕಿನ ಕಕ್ಕುಪ್ಪಿ ಗ್ರಾಮದ ಗ್ರಾಮಪಂಚಾಯಿತಿಯಲ್ಲಿ  ಆಯೋಜಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಯ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡುತ್ತ ಪ್ರತಿ ಗ್ರಾಮಪಂಚಾಯಿತಿಯಲ್ಲಿ ಈ ಸಮಿತಿ ರಚನೆ ಮಾಡಿ ತರಬೇತಿ ನೀಡುವ ಮೂಲಕ  ಬಾಲ್ಯ ವಿವಾಹ,ಬಾಲಕಾರ್ಮಿಕ ಪದ್ಧತಿ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಬೇಕು. ಗ್ರಾಮ ಪಂಚಾಯಿತಿಯಲ್ಲಿ 0- 18 ವರ್ಷದವರೆಗೆ ಇರುವ ಮಕ್ಕಳ ಮಾಹಿತಿ ಇಟ್ಟುಕೊಂಡಿರಬೇಕು ಪ್ರತಿ ವಾರ್ಡ್  ಸಭೆಯಲ್ಲಿ ಮಕ್ಕಳ ಮತ್ತು ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಗ್ರಾಮ ಪಂಚಾಯಿತಿಯಲ್ಲಿ ಬರುವ ಸೌಲಭ್ಯಗಳ ಫಲಾನುಭವಿಗಳಿಗೆ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಮಾಡದಂತೆ ಮುಚ್ಚಳಕ್ಕೆ ಪತ್ರವನ್ನು ಬರೆಸಿಕೊಳ್ಳ ಬೇಕು ಒಂದು ವೇಳೆ ಮಾಡಿದ್ದಲ್ಲಿ ಸೌಲಭ್ಯದ ಸಹಾಯಧನವನ್ನು ಪಂಚಾಯಿತಿಗೆ  ಹಿಂತಿರುಗಿಸಬೇಕಾಗುತ್ತದೆ ಎಂದು ತಿಳಿಸಬೇಕು ಸಭೆಯಲ್ಲಿ ನಾನು ನೀನು ಎನ್ನದೆ ಬಾಲ್ಯ ವಿವಾಹ,ದೇವದಾಸಿ ಪದ್ಧತಿ ಕಂಡು ಬಂದರೆ ತಕ್ಷಣವೇ ಸಮಿತಿಯ ಎಲ್ಲಾ ಸದಸ್ಯರು ಸಭೆ ಸೇರಿ ಚರ್ಚಿಸಿ ತಡಗಟ್ಟ ಬೇಕಾಗುತ್ತದೆ ಎಂದು ತಿಳಿಸಿದರು.         ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ  ಟಿ,ಅನ್ನಪೂರ್ಣ   ಮಾತನಾಡಿ  0-18 ವರ್ಷದೊಳಗಿನ ಮಕ್ಕಳಿಗೆ ಬಾಲ್ಯ ವಿವಾಹ ಮಾಡದೆ  ಅವರನ್ನು  ಶಾಲೆಗೆ ಕಳುಹಿಸಬೇಕು  ಬಾಲ್ಯ ವಿವಾಹ ಕಾಯ್ದೆ ಪ್ರಕಾರ 18ರ ವಯಸ್ಸಿನೊಳಗೆ ಹೆಣ್ಣು ಮಕ್ಕಳಿಗೆ 21ವರ್ಷದೊಳಗಿನ  ಗಂಡು ಮಕ್ಕಳಿಗೆ ಮದುವೆ ಮಾಡಿದರೆ ಪೋಷಕರಿಗೆ ಒಂದು ಲಕ್ಷ ದಂಡ ಎರಡು ವರ್ಷ ಜೈಲು ಶಿಕ್ಷೆ ಇರುತ್ತದೆ ನಮ್ಮ ಇಲಾಖೆಯಿಂದ ಬಾಲ್ಯ ವಿವಾಹ ತಡೆಗಟ್ಟಲು ನಾವು ಹೋದರೆ ಊರಿನ ಜನರು ಗಲಾಟೆ ಮಾಡುತ್ತಾರೆ ನಾವೆಲ್ಲರೂ ಸಮಿತಿಯಿಂದ ಒಗ್ಗಟ್ಟಾದರೆ ಬಾಲ್ಯ ವಿವಾಹವನ್ನು ತಡೆಗಟ್ಟಲು ಸಾಧ್ಯ ಮಹಿಳೆ ಮತ್ತು ಮಕ್ಕಳಿಗಾಗಿ ಅನೇಕ ಕಾನೂನುಗಳು ಇದ್ದು ಅವುಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ ಜೊತೆಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಹಕ್ಕುಗಳ ಸಮಿತಿಯ ಗುರಿ ಮತ್ತು ಉದ್ದೇಶ ಹಾಗೂ ಜವಾಬ್ದಾರಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮ ಪಂಚಾಯಿತಿಯ ಅಭಿವೃದ್ಧಿ   ಅಧಿಕಾರಿ ಶರಣಪ್ಪ  ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಆಯೋಜನೆ ಮಾಡಲಾಗುವುದು ತಪ್ಪದೇ ವಾರ್ಡ್  ಸಭೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ ಚರ್ಚೆ ಮಾಡಲಾಗುವುದು ನಮ್ಮ ಗ್ರಾಮ ಪಂಚಾಯಿತಿಗೆ ಬರುವ ಎಲ್ಲಾ ಹಳ್ಳಿಗಳಲ್ಲಿ ಇನ್ನು ಮುಂದೆ ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯ ಆಗದಂತೆ ತಡೆಗೋಟ್ಟಣ ಎಂದು ತಿಳಿಸಿದರು.ಕಕ್ಕುಪ್ಪಿ  ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳ ಶಾಲೆಯ ಮುಖ್ಯ ಗುರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಎಚ್ಒ,ಎಎನ್ ಎಂ,ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು,ಪೊಲೀಸ್ ಸಿಬ್ಬಂದಿ, ಮಹಿಳಾ ಸಂಘದ ಸದಸ್ಯರುಗಳು   ಹಾಗೂ ಸ್ನೇಹ ಸಂಸ್ಥೆ ಸಿಬ್ಬಂದಿ ಹಾಗೂ ಇತರರು  ಭಾಗವಹಿಸಿದ್ದರು. ಪ್ರಾರ್ಥನೆ: ಜಯಶ್ರೀ ಪ್ರಾರ್ಥಿಸಿದರು, ಶ್ರೀನಿವಾಸ  ಸ್ವಾಗತಿಸಿದರು ನಿರೂಪಣೆ ಹೆಚ್ .ಗೀತಾ ನಿರೂಪಿಸಿ ವಂದಿಸಿದರು.