ಸರ್ವರ ಒಳಿತಿನ ಬಜೇಟ್:ಹಾದಿಮನಿ

ಕಲಬುರಗಿ:ಫೆ.2: ಕೇಂದ್ರ ಬಜೆಟ್ ಬಡವರು, ರೈತರು, ಕೃಷಿಕರು, ವಿಶೇಷವಾಗಿ ಸ್ತ್ರೀಯರಿಗೆ ಹಾಗೂ ಯುವಕರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಒಳಿತಾಗುವ ಹಾಗೂ ಸ್ವಾಗತಾರ್ಹ ಬಜೆಟ್ ಇದಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಸಂತೋಷ ಹಾದಿಮನಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಮಾದರಿಯಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ, ಈ ಬಾರಿಯ ಮಧ್ಯಂತರ ಬಜೆಟ್ ಅನ್ನು ಸರ್ವವ್ಯಾಪಿ, ಸರ್ವಸ್ಪರ್ಶಿಯನ್ನಾಗಿಸಿದೆ.
ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಜೊತೆಗೆ ನಾರಿಶಕ್ತಿಯ ಸ್ವಾಭಿಮಾನದ ಸ್ವಾವಲಂಬನೆಗೆ ??ಲಖ್‍ಪತಿ ದೀದಿ” ಯೋಜನೆ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ.
ಜನಸಾಮಾನ್ಯರ ಮೇಲೆ ಯಾವುದೇ ಹೆಚ್ಚಿನ ತೆರಿಗೆ ಹೊರೆಯನ್ನು ಹೊರಿಸದೆ, ಬಂಡವಾಳ ಹೂಡಿಕೆಗೆ ಹಾಗೂ ಹೊಸ ಉದ್ಯೋಗಗಳ ಸೃಜನೆಗೆ ಆದ್ಯತೆ ನೀಡಿರುವುದು ಅತ್ಯಂತ ಭವ್ಯ ಹಾಗೂ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅತ್ಯಂತ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.