ಸರ್ವರ ಒಳಿತನ್ನೇ ಬಯಸುವ ತುಡಿತ ನಮ್ಮದಾಗಲಿ : ಎ.ಎಂ. ಬಗಲಿ

ವಿಜಯಪುರ:ನ.15: ಮಾನವನಿಗೆ ಜೀವನ ಮೌಲ್ಯಗಳನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಎಲ್ಲರಿಗೂ ಮಾರ್ಗದರ್ಶಕರಾದವರು ದಾನ, ಧರ್ಮ ಮಾಡುತ್ತ ಜೀವನ ಪರಿಪೂರ್ಣಗೊಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನೆರೆ ಮನೆಯವನು ಹಸಿದಾಗ ನಾವು ಹೊಟ್ಟೆತುಂಬ ಉಣ್ಣುವವನು ನನ್ನವನಲ್ಲ. ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಅವರ ಜೀವನ ಮೌಲ್ಯಗಳಿಗೆ ಒತ್ತು ನೀಡಿದ ಲೋಕೋದ್ದಾರಕರಾದ ಪ್ರವಾದಿ ಮೊಹಮ್ಮದ (ಸ.ಅ)ರವರ ಜಯಂತ್ಯೋತ್ಸವ ಪ್ರಯುಕ್ತ ಸ್ಥಳೀಯ ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಪ್ರವಾದಿ ಮೊಹಮ್ಮದ (ಸ.ಅ) ರವರ ಜೀವನ ಸಂದೇಶಗಳ ಬಗ್ಗೆ ಏರ್ಪಡಿಸಿದ ಚಿಂತನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎ.ಎಂ. ಬಗಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತ ಸರ್ವರ ಒಳಿತನ್ನೇ ಬಯಸುವ ತುಡಿತ ಪ್ರವಾದಿಗಳದಾಗಿತ್ತು. ಮಾನವ ಕುಲದ ಉದ್ದಾರಕರು. ಅವರ ಜೀವನ ಸರಳವಾಗಿದ್ದು ಲೋಕಕ್ಕೆ ಮಾದರಿಯಾಗಿದ್ದಾರೆ. ಇರುವ ಸಂಪತ್ತಿನಲ್ಲಿ ಕೆಲವೊಂದು ಭಾಗವನ್ನು ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಬೇಕೆಂದು ಬೋಧಿಸಿದ್ದಾರೆ. ಲೌಖಿಕದ ಯಾವ ವಸ್ತುಗಳನ್ನು ಬಯಸದೇ ಲೋಕದ ಒಳಿತಿಗಾಗಿ ಸದಾಕಾಲ ಚಿಂತಿಸುವರಾಗಿದ್ದರು. ಆದ್ದರಿಂದ ಇಂದಿಗೂ ಅವರು ಮಾದರಿಯಾಗಿದ್ದಾರೆ. ಸತ್ಯ ವಿಶ್ವಾಸಿಯಾಗಿ ಸಹಕಾರದಿಂದ ಜೀವನ ಸುಂದರವಾಗುವುದು ಎಂಬ ಸಂದೇಶವನ್ನು ಮಾನವ ಕುಲಕ್ಕೆ ಸಾರಿದವರು. ಗುಲಾಮರ ವಿಮೋಚನೆ ಹಾಗೂ ಮಹಿಳಾ ಶೋಷಣೆಯನ್ನು ವಿಮುಕ್ತಿಗೊಳಿಸಿದ ಸಮಾನತೆಯ ಹರಿಕಾರರಾದವರು ಪ್ರವಾದಿ ಮೊಹಮ್ಮದ (ಸ.ಅ) ರವರು ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಚಾರ್ಯರಾದ ಎಂ.ಎಂ. ಗುರಡಿ, ಡಾ. ಮೊಹಮ್ಮದ ಅಫ್ಜಲ್ ಆಸೀನರಾಗಿದ್ದರು. ಇದೇ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ (ಸ.ಅ) ರವರ ಜೀವನ ಸಂದೇಶ ಕುರಿತು ಆಯೋಜಿಸಿದ ಕನ್ನಡ, ಇಂಗ್ಲೀಷ, ಹಿಂದಿ, ಉರ್ದು ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿ ಪ್ರೊ. ಶಾಕೀರಾ ಮುಲ್ಲಾ, ಮೌಲಾನಾ ಸುಬಾನ ಬಾಗವಾನ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಂ.ಆರ್. ಜೋಶಿ, ಎನ್.ಜೆ. ಪಠಾಣ, ಕೆ.ಪಿ.ಸಾದತ, ಡಾ. ಬಿ.ಎ. ದಪೇದಾರ, ಯು.ಎನ್. ಕುಂಟೋಜಿ, ಎಂ.ಎ. ಹೆಬಳಿಕರ, ಟಿ.ಎಂ. ಪುಣೇಕರ, ಎ.ಸಿ.ಸುರಕಿ, ಜೆ.ಎಸ್. ಬಿರಾದಾರ, ಎಂ.ವಾಯ್. ಆಳಂದ ಉಪಸ್ಥಿತರಿದ್ದರು