ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಸದಾಶಯದಂತೆ ಬಾಳೊಣಃ ಧನ್ಯಕುಮಾರ್ ಗುಂಡೆ

ವಿಜಯಪುರ :ಜು.10: ಭಾರತ ದೇಶವು ಹಲವು ಧರ್ಮ ಭಾಷೆ.ಸಂಸ್ಕøತಿಗಳನ್ನು ಹೊಂದಿದ ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಸದಾಶಯದಂತೆ ಬಾಳೊಣ ಎಂದು ಕೇಂದ್ರ ಅಲ್ಪಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ನುಡಿದರು.

ಜಿಲ್ಲಾ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲು ಮತ್ತು ಸನ್ಮಾನ ಸ್ವೀಕರಸಿ ಮಾತನಾಡಿದ ಅವರು. ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಸರ್ವೆಜನ ಸುಖಿನೋಭವಂತು ಎನ್ನುವಂತೆ ವಿಶೇಷವಾಗಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವದರ ಜೊತೆಗೆ ಅವರ ವಿವಿಧ ಅವಕಾಶ ವಂಚಿತರ ಬೇಡಿಕೆಗಳನ್ನು ಈಡೇರಿಸಲು ಬದ್ದವಾಗಿದೆ ಎಂದು ಹೇಳಿ ನಾವು ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಕೂಡ ತಪ್ಪದೆ ಪಾಲಿಸಬೇಕೆಂದು ತಿಳಿಸಿದರು.

ತಾಲೂಕಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿಜಯಪುರ ಉಪವಿಭಾಗದ ಕಲ್ಯಾಣಾಧಿಕಾರಿ ಎಸ್.ಎ.ಜಮಾದಾರ ಸ್ವಾಗತಿಸಿದರು. ನ್ಯಾಯವಾದಿ ದಾನೇಶ ಅವಟಿ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಎಂ. ಪಾಟೀಲ್ (ಗಣಿಹಾರ) ವಂದಿಸಿದರು.

ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಅಬ್ದುಲ್ ರಜಾಕ್ ಹೊರ್ತಿ. ಅಭಿಯಂತರ ಮಹಮದ್ ರಫೀಕ್ ಟಪಾಲ್. ಮುಖಂಡರಾದ ಇಜಾಜ್ ಅಹಮದ ಮುಕಬಿಲ್.ಜಿಲ್ಲಾ ಸ್ಲಂ ಅಭಿವೃದ್ಧಿ ಸಮಿತಿ ಸದಸ್ಯ ಅಕ್ರಂ ಮಾಸ್ಯಾಳಕರ, ಅಂಜುಮನ್-ಎ-ಇಸ್ಲಾಮ ಕಾರ್ಯದರ್ಶಿ ಅಬ್ದುಲಹಮೀದ ಅಥಣಿ, ನಜೀಬ ಅಶ್ರಫ ಅಥಣಿ, ಉಪಾಧ್ಯಕ್ಷ ಸೈಯ್ಯದ ಖಾದ್ರಿ ಗುಡಗುಂಟಿ, ಕೆ.ಜಿ.ಪಿ.ಎ ಅಸೋಶಿಯೇಶನ್ ಕಾರ್ಯದರ್ಶಿ ಜಿಯಾ ಪಠಾಣ, ನ್ಯಾಯವಾದಿ ನಾಗರಾಜ್ ಲಂಬು. ಜಾಫರ್ ಅಂಗಡಿ. ಡಾ. ಎಂ ಎಸ್.ಗುರಿಕಾರ, ಮುನೋಳ್ಳಿ ಸರ್. ಶಕೀಲ್ ಗೊಡೆಸವಾರ. ಶಾರುಕ್ ಪಠಾಣ್. ಶರಣ ಬಸವ ಕೊನಳ್ಳಿ. (ಬಸವ ನಗರ). ಪ್ರಕಾಶ ರಜಪೂತ (ಯೋಗಾಪುರ). ನಿಂಗಪ್ಪ ಸಂಗಾಪುರ. ಶಿದ್ದು ಅವಟಿ. ಅಂಬಾಜಿ ಚವ್ಹಾಣ. ರಾಜೇಶ್ ಸೂರ್ಯವಂಶಿ. ರಾಜೇಂದ್ರ ಬೆಳಗಲಿ ಇನ್ನೂ ಹಲವಾರು ಜನ ಉಪಸ್ಥಿತರಿದ್ದರು.