ಸರ್ವಧರ್ಮ ಹನುಮಂತ ಕೋಟೆಯಿಂದ ಅರವಟ್ಟಿಗೆ ಆರಂಭ

ಮಾನ್ವಿ,ಏ.೦೧- ಪಟ್ಟಣದ ಪಂಪಾ ಕಾಂಪ್ಲೆಕ್ಸ್ ಸುಂದರಿ ಮೊಬೈಲ್ ಅಂಗಡಿಯ ಮುಂಭಾಗದಲ್ಲಿ ಸರ್ವಧರ್ಮ ಸೇವಾ ವೆಲ್ಫರ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಹನುಮಂತ ಕೋಟೆ ಹಾಗೂ ಸಮನ್ವಯ ಸಮಿತಿಯ ಸ್ನೇಹಿತರಿಂದ ಒಂದು ದಿನಕ್ಕೆ ಮಜ್ಜಿಗೆ ವಿತರಣೆ ಹಾಗೂ ಬೇಸಿಗೆ ಮುಗಿಯುವವರೆಗೂ ಶುದ್ದೀಕರಣ ನೀರಿನ ಅರವಟ್ಟಿಗೆಯನ್ನು ಆರಂಭಿಸಿದರು.
ನಂತರ ಮಾತಾನಾಡಿದ ಅವರು ಬಡವರು ಅನುಕೂಲ ಆಗುವ ಉದ್ದೇಶದಿಂದ ನೀರಿನ ಅರವಟ್ಟಿಗೆಯನ್ನು ಆರಂಭವನ್ನು ಮಾಡಲಾಗಿದ್ದು ಇದಕ್ಕೆ ಅನೇಕ ಸ್ನೇಹಿತರ ಸಹಕಾರವೇ ಕಾರಣ ಎಂದರು ನಂತರ ನಾನು ಕಳೆದ ಹಲವಾರು ವರ್ಷಗಳಿಂದ ಬಡವರಿಗೆ, ನಿರ್ಗತಿಕರಿಗೆ, ಸೇರಿದಂತೆ ಅನೇಕರಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ ಹಾಗೂ ಈ ಕಡು ಬೇಸಿಗೆಯಲ್ಲಿ ಹಳ್ಳಿಗಳಿಂದ ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಿದ್ದೇನೆ ಎಂದು ಅಧ್ಯಕ್ಷ ಹನುಮಂತ ಕೋಟೆ ಹೇಳಿದರು.