ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಕೊಲ್ಹಾರ:ಮಾ.5:20 ನೇ ಶತಮಾನದ ಸೂಫಿ ಸಂತ ಸುಪ್ರಸಿದ್ಧ ಅಲ್ ಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ ಕಾದ್ರಿ (ಅಲಾಹಬಾದ ಮೌಲಾನಾ) ಅವರ 31 ನೇ ಉರುಸಿನ ನಿಮಿತ್ಯವಾಗಿ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಅಲಾಹಬಾದ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾರ್ಚ್ 7 ರಂದು ಮುಂಜಾನೆ 11 ಗಂಟೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಖಾನಕಾಯೆ ಗಫಾರೀಯಾ ಪೀಠಾಧಿಪತಿಗಳಾದ ಅಲ್ ಹಾಜ್ ಶಾಹ ಬಖ್ತಿಯಾರಖಾನ್ ಖಾದ್ರಿ ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮುಖಂಡರಾದ ಉಸ್ಮಾನ್ ಪಟೇಲ್ ಖಾನ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ವಿಜೃಂಭಣೆಯಿಂದ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಿಜಯಪುರ ಜಾಮಿಯಾ ಹಾಶೀಮಪೀರ ಪೀಠಾಧಿಪತಿಗಳಾದ ಶ್ರೀ ಹಜರತ ಸೈಯ್ಯದ ಶಾ ಮಹಮ್ಮದ ತನ್ವೀರ್ ಹಾಶ್ಮೀ.
ಯರನಾಳ ವಿರಕ್ತ ಮಠದ ಶ್ರೀ ಗುರು ಸಂಗನಬಸವ ಮಹಾಸ್ವಾಮಿಜಿಗಳು.
ಇಳಕಲ್ ಜಾಮಿಯಾ ಅರೇಬಿಕ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಸಯ್ಯದ ಬಹಾವೊದ್ದಿನ ಸದರಕಾಜಿ,
ಬೇಲೂರ-ಕೊಲ್ಹಾರ ಹಿರೇಮಠದ
ಪೂಜ್ಯಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು,
ಕೊಲ್ಹಾರ ದಿಗಂಬರೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಕಲ್ಲಿನಾಥ ದೇವರು, ಕೊಲ್ಹಾರ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮಿಗಳು ವಹಿಸಿಕೊಳ್ಳುವರು.
ಅಧ್ಯಕ್ಷತೆ ಅಲ್‍ಹಾಜ ಡಾ. ಬಖ್ತಿಯಾರಖಾನ ಕಾದ್ರಿ ಉತ್ತರಾಧಿಕಾರಿಗಳು ಖಾನಕಾಯೇ ಗಪ್ಪಾರಿಯಾ ಕೊಲ್ಹಾರ. ಪ್ರಸಕ್ತ ವರ್ಷದ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಭಾಜರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಜಾನಪದ ವಿದ್ವಾಂಸರಾದ ಶಂಭು ಬಳಿಗಾರ, ಮುಖ್ಯ ಅತಿಥಿಗಳಾಗಿ ಸಚಿವ ಶಿವಾನಂದ.ಎಸ್ ಪಾಟೀಲ್, ಮಾಜಿ ಸಚಿವ ಎಸ್.ಆರ್ ಪಾಟೀಲ್, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಸಂಶೋಧಕರು ಹಾಗೂ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಮಾಜಿ ಜಿ ಪಂ ಸದಸ್ಯರಾದ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಬಿ ಪಕಾಲಿ, ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಎಸ್.ಎಸ್ ಓತಗೇರಿ, ಬ.ಬಾಗೇವಾಡಿ ವಿಶ್ವ ಬಂಧು ಬಸವ ಸಮಿತಿ ಅಧ್ಯಕ್ಷರಾದ ಡಾ.ಅಮರೇಶ.ಎಸ್ ಮಿಣಜಗಿ, ಹಿರಿಯ ಪತ್ರಕರ್ತರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಫೀ ಭಂಡಾರಿ,
ನಾಗರಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ನಾನಾಗೌಡ ಪಾಟೀಲ್, ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಲಾಭಕ್ಷ ಕಾಖಂಡಕಿ, ಜಾಕೀರ್ ಸೌದಾಗರ, ಹನೀಫ್ ಮಕಾನದಾರ, ಅಬ್ದುಲ್ ಪಕಾಲಿ, ನಜೀರ್ ಖಾಜಿ ಸಹಿತ ಅನೇಕರು ಉಪಸ್ಥಿತರಿದ್ದರು.
ಹಾಜಿ ಅಯ್ಯೂಬ್ ಖಾನ್ ಪಠಾಣ ನಿರೂಪಿಸಿ ವಂದಿಸಿದರು.