ಸರ್ವಧರ್ಮದವರ ಮನಸ್ಸು ಗೆದ್ದಿರುವ ಬಸವಪ್ರಭು ಶ್ರೀಗಳು

ದಾವಣಗೆರೆ; – ದಾವಣಗೆರೆ ನಗರದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನ ಮತ್ತು ಸರ್ವ ಧರ್ಮದವರ ಹೃದಯ ಗೆದ್ದಿರುವ ವಿರಕ್ತ ಮಠದ ಬಸವಪ್ರಭು ಸ್ವಾಮಿಜಿಗಳು ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ರವರು ಹರ್ಷವ್ಯಕ್ತಪಡಿಸಿದ್ದಾರೆ.ವಿರಕ್ತ ಮಠದ ಸಭಾಂಗಣದಲ್ಲಿ ಬಸವಪ್ರಭು ಶ್ರೀಗಳ ಜನ್ಮದಿನಕ್ಕೆ ಶುಭ ಕೋರಿ ಆಶೀರ್ವಾದ ಪಡೆದು ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಮೈಗೊಡಿಸಿಕೊಂಡು ಚಿತ್ರದುರ್ಗದ ಮುರುಘಾ ಶರಣರ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆ ಕೋಮುಸೌಹರ್ದತೆಯಿಂದ ರಾಜ್ಯಕ್ಕೆ ನಮ್ಮ ಜಿಲ್ಲೆ  ಮಾದರಿಯಾಗಿದೆಯೆಂದರೆ ಶರಣರ ವಿಭಿನ್ನ ಕಾರ್ಯಕ್ರಮಗಳು ಎಂದರೆ ತಪ್ಪಾಗಲಾರದು.ಎಲ್ಲಾ ಧರ್ಮದವರೊಂದಿಗೆ ಪ್ರೀತಿ ಹಂಚುವ ಕೆಲಸ ಮಾಡಿ ಶೋಷಿತರ ಬಡವರ ಹಾಗೂ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ರ ಮತ್ತು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರ ಹೃದಯ ಗೆದ್ದಿರುವ ನಮ್ಮ ಬಸವ ಪ್ರಭು ಶ್ರೀಗಳು ನಮ್ಮ ವಿರಕ್ತ ಮಠದ ಗೌರವ ಘನತೆ ಹೆಚ್ಚಿಸಿದ್ದಾರೆ.ಭಕ್ರರಲ್ಲೇ ದೇವರನ್ನು ಕಾಣುವ ಶ್ರೀಗಳ ಔದಾರ್ಯತೆಯನ್ನು ಬಾಡದ ಆನಂದರಾಜ್ ಶ್ಲಾಘಿಸಿದರು. ಶ್ರೀಗಳು ನೂರುಕಾಲ ನಗುನಗುತ್ತಾ ಅವರ ಆಶೀರ್ವಾದ ಸದಾ ಇರಲಿ ಎಂದು ಆಶಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾದವ್.ರೈತಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್.ಪ್ರೇರಣಾ ಸಂಸ್ಥೆಯ ಚೇತನಾ ಶಿವಕುಮಾರ್.  ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೇಲ್.ಟಿಂಕರ್ ಮಂಜಣ್ಣ.ಪತ್ರಕರ್ತ ಮಧುನಾಗರಾಜ್.ಗುರು ಸೋಗಿ ಇನ್ನೂ ಮುಂತಾದವರು ಶ್ರೀಗಳಿಗೆ ಜನ್ಮದಿನಕ್ಕೆ ಗೌರವರ್ಪಣೆ ಮಾಡಿ ಶುಭ ಕೋರಿದರು.

Attachments area