ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ: ಎಚ್. ನಾಗೇಶ್ ಮನವಿ

ಬೆಂಗಳೂರು,ಮೇ.೨- ರಾಜ್ಯದಲ್ಲಿ ಹಾಗೂ ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಳತ್ತೂರು ಎಚ್.ನಾಗೇಶ್ ಮನವಿ ಮಾಡಿದರು.
ಮಹದೇವಪುರ ಕ್ಷೇತ್ರದ ವಾಲೇಪುರ, ಮಧುರಾನಗರ,ಸೋರಹುಣಸೆ,ವರ್ತೂರು, ಬಳಗೆರೆ,ಪಣತ್ತೂರುದಿಣ್ಣೆ,ದೊಡ್ಡಕನ್ನಹಳ್ಳಿ,ದೇವರ ಬೀಸನಹಳ್ಳಿ,ಬೋಗನಹಳ್ಳಿ,ಕಾಡಬೀನಹಳ್ಳಿ,ಬೆಳ್ಳಂದೂರು,ಯಮಲೂರು ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದರು.
ನಾನು ಸ್ಥಳೀಯ ಬೆಳತ್ತೂರು ನಿವಾಸಿಯಾಗಿರುವುದರಿಂದ ಮಹದೇವಪುರ ಕ್ಷೇತ್ರದ ಸಮಸ್ಯೆಗಳ ಅರಿವಿದ್ದು,ಹಂತಹಂತವಾಗಿ ಪರಿಹರಿಸುವ ಮೂಲಕ ಮಾದರಿ ಮಹದೇವಪುರ ಕ್ಷೇತ್ರ ನಿರ್ಮಾಣ ಮಾಡುತ್ತೆನೆಂದು ಭರವಸೆ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಉತ್ಸಾಹದಿಂದ ಕಾರ್ಯ ಮಾಡುತ್ತಿದ್ದು ನನಗೆ ಬೆನ್ನೆಲುಬಾಗಿ ನಿಂತು ನನಗೆ ವಿಜಯಮಾಲೆ ಹಾಕಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ನುಡಿದರು.
ಗ್ರಾಮಿಣ ಹಾಗೂ ಐಟಿಬಿಟಿ ಕೇಂದ್ರವಾಗಿರುವ ಮಹದೇವಪುರ ಕ್ಷೇತ್ರ ಸರ್ವಜನಾಂಗದ ನೆಚ್ಚಿನ ತಾಣವಾಗಿದ್ದು,ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೆನೆಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ಟಿ. ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಟಿಬಿ ಬಾಬು,ಬಾಬುಗೌಡ ಮತ್ತಿತರರು ಇದ್ದರು.

ಸುದ್ದಿಚಿತ್ರ:ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಳತ್ತೂರು ಎಚ್.ನಾಗೇಶ್ ಅವರು ವರ್ತೂರು ವಾರ್ಡನ ವಿವಿಧೆಡೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಪಕ್ಷದ ಹಲವಾರು ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.