ಸರ್ವಜ್ಞ ವಿದ್ಯಾಪೀಠ ಶಾಲೆಯಲ್ಲಿ ಬಸವ ಜಯಂತಿ ಆಚರಣೆ

ತಾಳಿಕೋಟೆ:ಎ.24: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜಗಜ್ಯೋತಿ ವಿಶ್ವ ಗುರು ಬಸವೇಶ್ವರರ 890 ನೇ ಜಯಂತೋತ್ಸವನ್ನು ಆಚರಿಸಲಾಯಿತು.

 ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ ಮಂಗಳೂರ ರವರು ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದರು. ಕಾರ್ಯಕ್ರದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ, ಶಿಕ್ಷಕರಾದ ಶರಣಗೌಡ ಕಾಚಾಪೂರ, ರೂಪಾ ಪಾಟೀಲ, ಭಾಗ್ಯಶ್ರೀ ಹೋಳಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.