ಸರ್ವಜ್ಞ ವಿದ್ಯಾಪೀಠ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ

ತಾಳಿಕೋಟೆ:ಫೆ.25: ತಾಳಿಕೋಟೆ ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಶುಕ್ರವಾದಂದು ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿಷಯವಾರು ರಸಪ್ರಶ್ನೆ ಕಾರ್ಯಕ್ರಮ ಜರುಗಿತು.
ಒಟ್ಟು 32 ಶಾಲೆಗಳು ಭಾಗಹಿಸಿದ್ದು ಮೊದಲಿಗೆ ಎಲ್ಲಾ ಶಾಲಾ ವಿಧ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಮಾಡಲಾಯಿತು. ಅದರಲ್ಲಿ 79 ಅಂಕಗಳನ್ನು ಪಡೆದ ಸರ್ವಜ್ಞ ವಿದ್ಯಾಪೀಠ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅರ್ಹತಾ ಸುತ್ತಿನ ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಮತ್ತು ಸರ್ವಜ್ಞ ವಿದ್ಯಾಪೀಠ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ 73 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದರು. ಒಟ್ಟು 10 ತಂಡಗಳನ್ನು ಆಯ್ಕೆ ಮಾಡಿ ರಸಪ್ರಶ್ನೆಯನ್ನು ಕೆಳಲಾಯಿತು. ಅಂತಿಮ ಸುತ್ತಿನಲ್ಲಿ ಸರ್ವಜ್ಞ ವಿದ್ಯಾಪೀಠ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶರತ್ ಬಸವರಾಜ ಹುಗ್ಗಿ, ರಾಧಿಕಾ ದೇವರಾಯ ಗುಡಿಹಾಳ, ಮಲ್ಲಿಕಾರ್ಜುನ ಶಂಕರ ಹಳಕೂರ ಅವರು ದ್ವಿತೀಯ ಸ್ಥಾನವನ್ನು ಪಡೆದು ವಿಜೇತರಾದರು. ವಿಜೇತರಾದ ತಂಡಕ್ಕೆ ಮೂರು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ವಿತರಿಸಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಸರ್ವಜ್ಞ ವಿದ್ಯಾಪೀಠ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರು, ಮುಖ್ಯಗುರುಗಳಾದ ಸಂತೋಷ ಪವಾರ, ಹಾಗೂ ಗುರುಬಳಗದವರಾದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ರÀಸುಲಸಾ ತುರಕನಗೇರಿ, ಬಸವರಾಜ ಸವದತ್ತಿ, ಸಿದ್ದನಗೌಡ ಮುದ್ನೂರ, ರವಿಕುಮಾರ ಮಲ್ಲಾಬಾದಿ, ಲಕ್ಷ್ಮೀ ಚುಂಚುರ, ಗಿರೀಶ ಎಚ್, ರೂಪಾ ಪಾಟೀಲ, ಮಿನಾಕ್ಷಿ ರಜಪೂತ, ರೂಪಾ ಬಿರಾದಾರ, ಶಿವಲೀಲಾ ಚುಂಚುರ, ಸಂಗೀತಾ ಬಿರಾದಾರ, ಭಾಗ್ಯಶ್ರೀ ಗಿರಿನಿವಾಸ, ಅಂಬೂಜಾ ಹಜೇರಿ, ಜ್ಯೋತಿ ನಾಯ್ಕ, ಜೆಸಮೀನ ಆಲ್ದಾಳ, ವಿದ್ಯಾಶ್ರೀ ಗಿರಿನಿವಾಸ, ಶರಣಗೌಡ ಕಾಚಾಪುರ, ಬಸವರಾಜ ಕೋಣ್ಣುರ, ಜಯಶ್ರೀ ಮಕಾಸಿ, ರೇಷ್ಮಾ ನಧಾಪ್, ಮುಬಿನ ಮುರಾಳ, ಮೇಘಾ ಬಲಕಲ್ಲ, ನಾಗರತ್ನ ಮೈಲೇಶ್ವರ ಹಾಗೂ ಸಿಬ್ಬಂದಿ ವರ್ಗದವರು ವಿಜೇತರಾದ ವಿದ್ಯಾರ್ಥಿಗಳಿಗೆ ಅಬಿನಂದನೆ ತಿಳಿಸಿದರು.