ಸರ್ವಜ್ಞ ಜಯಂತಿ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.22: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬ ಸತ್ಯ ಅರಿತು, ಊರೂರು ಅಲೆದು, ಸರ್ವರೊಳಗೊಂದು ನುಡಿ ಕಲೆತು,ಕಂಡ ಸತ್ಯವನ್ನು ಕಂಡಂತೆ ಯಾರ ಹಂಗಿಲ್ಲದೆ ತಮ್ಮ ತ್ರಿಪದಿಗಳಲ್ಲಿ ವ್ಯಕ್ತ ಪಡಿಸಿದವರು ಸರ್ವಜ್ಞ ಕವಿ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು.
 ಇಂದು ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಎಣ್ಣೆ ಬೆಣ್ಣೆಯ ಋಣವು,ಅನ್ನ ವಸ್ತ್ರದ ಋಣವು, ಹೊನ್ನು ಹೆಣ್ಣಿನ ಋಣವು ತೀರಿದಾಕ್ಷಣ ಮಣ್ಣು ಎಂದು ಹೇಳುತ್ತಾ, ಆಸೆಗಳು ಮಿತಿಯಾಗಿರಬೇಕೇ ಹೊರತು ಅತಿಯಾಗಬಾರದು ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಗಾಯತ್ರಿ ವಾಲ್ಮೀಕಿ, ವಿನಯ್, ಕೆ.ಸಿ.ಇಂದುಶ್ರೀ,ಸುಧಾ ಕುರುಬರ, ಸಂದೀಪ್ ಹಾಗೂ ಉಮೇಶ್ ಅವರಿಗೆ ಬಹಮಾನ ವಿತರಿಸಲಾಯಿತು.
ಶಿಕ್ಷಕರಾದ ಬಸವರಾಜ ಸರ್ವಜ್ಞ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ನೆರವೇರಿಸಿದರು.
ಶಿಕ್ಷಕರಾದ ಮುನಾವರ ಸುಲ್ತಾನ,ಮೋದಿನ್ ಸಾಬ್, ಚನ್ನಮ್ಮ, ಸುಮತಿ,ವೈಶಾಲಿ,ಶ್ವೇತಾ, ಉಮ್ಮೆಹಾನಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.