ಸರ್ವಜ್ಞ ಚಿಣ್ಣರ ಲೋಕ ಶಾಲೆಯಲ್ಲಿ “ಮಕ್ಕಳ ದಿನಾಚರಣೆ”

ಕಲಬುರಗಿ,ನ.14: ನಗರದ ಸರ್ವಜ್ಞ ಚಿಣ್ಣರ ಲೋಕ ಶಾಲೆಯಲ್ಲಿ “ಮಕ್ಕಳ ದಿನಾಚರಣೆ”ಯನ್ನು ಸರ್ವಜ್ಞ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಐಐಟಿಯನ್ ಶ್ರೀ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕರು ನೃತ್ಯ ರೂಪಕ ಮತ್ತು ಸಂಸಾರವೆಂಬ ಅರ್ಥಪೂರ್ಣ ಸ್ಕಿಟ್ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ಚಿಣ್ಣರ ಲೋಕ ಶಾಲೆಯ ಶೈಕ್ಷಣಿಕ ನಿರ್ದೇಶಕಿಯಾದ ಶ್ರೀಮತಿ ಸಂಗೀತಾ ಅಭಿಷೇಕ್ ಪಾಟೀಲ, ಸರ್ವಜ್ಞ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಜಯ ನಾಲವಾರ, ಶ್ರೀ ಪ್ರಭುಗೌಡ ಸಿದ್ಧಾರೆಡ್ಡಿ, ಶ್ರೀ ಕರುಣೇಶ ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ, ಶ್ರೀಮತಿ ಕವಿತಾ ಪಾಟೀಲ, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.