
ಕಲಬುರಗಿ, ಸೆ 14: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವವಿಜ್ಞಾನ ಮಹಾವಿದ್ಯಾಲಯ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಮುಂಜಾವಿಗೊಂದು ನುಡಿಕಿರಣ-ಗುಡ್ ಮಾರ್ನಿಂಗ್ 365 ನುಡಿಮುತ್ತುಗಳ ಚಿಂತನ-ಮಂಥನ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು
ಮಾತನಾಡುತ್ತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ
ನುಡಿಮುತ್ತುಗಳನ್ನು ಓದಿದಾಗ, ಕೇಳಿದಾಗ, ಅವುಗಳನ್ನು ಜೀವನದಲ್ಲಿ
ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಸುಂದರ ಬದುಕು
ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸುಸಂಸ್ಕøತ ನಾಗರಿಕನಾಗಿ
ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ
ಓದಿದಾಗ ಮಾತ್ರ ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಶಕ್ತಿ
ಬರುತ್ತದೆ. ಯುವಕರು ಯಾವದೇ ದುಶ್ಚಟಕ್ಕೆ ಬಲಿಯಾಗದೆ ಸತ್ಪ್ರಜೆಯಾಗಿ
ಬಾಳುವಂತಾಗುತ್ತದೆ. ಒಳ್ಳೆಯ ಆಚಾರ-ವಿಚಾರ, ನಡೆ-ನುಡಿ, ಸಂಸ್ಕøತಿ-ಸಂಸ್ಕಾರಪಡೆದು ಪಾಲಕರನ್ನು, ಶಿಕ್ಷಕರನ್ನು ಗೌರವಿಸಬೇಕು. ಗುರುಗಳಿಗಿಂತ
ಎತ್ತರವಾಗಿ ಬೆಳೆದು ಅವರಲ್ಲಿ ಅಭಿಮಾನ ಮೂಡುವಂತೆ ಮಾಡಬೇಕು.
ಜೀವನದಲ್ಲಿ ಬರುವ ಕಷ್ಟಗಳನ್ನು ತನ್ನ ಸಾಧನೆಯ ಮೆಟ್ಟಿಲುಗಳನ್ನಾಗಿ
ಮಾಡಿಕೊಳ್ಳಬೇಕು. ಕಷ್ಟವನ್ನು ಎದುರಿಸಿ ಬೆಳೆದವನೇ ದೊಡ್ಡ
ವ್ಯಕ್ತಿಗಳಾಗುತ್ತಾರೆ. ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಸಾಧನೆ ಅವರ ಉನ್ನತವಾದ ಶ್ರೇಷ್ಠವಾದ ವಿಚಾರಧಾರೆಗಳು
ನುಡಿಮುತ್ತುಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ, ಅಮೂಲ್ಯವಾದ
ಜ್ಞಾನರತ್ನವಾಗಿವೆ, ಅನುಭವದ ಅಮೃತವಾಗಿವೆ, ಮಾನವೀಯ ಮೌಲ್ಯಗಳನ್ನುಒಳಗೊಂಡ ಮಾಣಿಕ್ಯದ ದೀಪ್ತಿಗಳಾಗಿವೆ. ಅವುಗಳನ್ನು ಅರ್ಥಮಾಡಿಕೊಂಡುಬದುಕಿದರೆ ಬದುಕು ಹಸನಾಗುತ್ತದೆ, ಸಮಾಜ ಸ್ವಸ್ಥವಾಗುತ್ತದೆ, ಎಲ್ಲೆಡೆ ನೆಮ್ಮದಿ ಇರುತ್ತದೆ ಎಂದು ಪ್ರೇರೇಪಿಸಿದರು. ಉಪನ್ಯಾಸಕಿ ಡಾ. ವಿದ್ಯಾವತಿ ಪಾಟೀಲ ಅವರು ಮಾತನಾಡುತ್ತ, ಸರಿಯಾದಸಮಯಕ್ಕೆ ಮಾಡಿದ ಸಣ್ಣ ಕೆಲಸ ಮುಂಬರುವ ದಿನಗಳಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಲ್ಲದು ಎಂಬ ನ್ಯಾಯಮೂರ್ತಿ ಡಾ. ಶಿವರಾಜ ವಿ.ಪಾಟೀಲ ಅವರ ನುಡಿಮುತ್ತು ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನು ಬದಲಾಯಿಸಿಅವರನ್ನು ಜ್ಞಾನದ ಬೆಳಕಿನಡೆಗೆ ಕರೆದೊಯ್ಯುತ್ತದೆ ಎಂದರು.
ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಾಜೇಶ್ವರಿ, ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಜೀವನ,ಸಾಧನೆಯನ್ನು ಕುರಿತು ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಪ್ರಶಾಂತ ಕುಲಕರ್ಣಿ , ಸರ್ವಜ್ಞ ಪದವಿ ಕಾಲೇಜು ಪ್ರಾಚಾರ್ಯ ಪ್ರಭುಗೌಡ ಸಿದ್ಧಾರೆಡ್ಡಿ,ಕರುಣೇಶ್ ಹಿರೇಮಠ,ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೌಮ್ಯ, ರಾಧಿಕಾ ನಿರೂಪಿಸಿದರು. ಅಮರ ಸ್ವಾಗತಿಸಿದರು. ಶರಣಮ್ಮ ಪ್ರಾರ್ಥಿಸಿದರು.ಸ್ವಾತಿ ವಂದಿಸಿದರು.