ಸರ್ವಜ್ಞ ಕಾಲೇಜಿನಲ್ಲಿ ಚಿಂತನ ಮಂಥನ

ಕಲಬುರಗಿ,ಆ 24: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವವಿಜ್ಞಾನ ಮಹಾವಿದ್ಯಾಲಯ ಹಾಗೂ ಜಸ್ಟಿಸ್ ಶಿವರಾಜ ವಿ. ಪಾಟೀಲ ಫೌಂಡೇಶನ್ (ರಿ) ಸಂಯುಕ್ತಾಶ್ರಯದಲ್ಲಿ, ಶ್ರಾವಣ ಮಾಸದ ನಿಮಿತ್ಯ ವಿದ್ಯಾರ್ಥಿಗಳಿಗೆವ್ಯಕ್ತಿತ್ವ ವಿಕಸನ ಪ್ರೇರಣೋಪನ್ಯಾಸ ಮತ್ತು ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ ಅವರ ಮುಂಜಾವಿಗೊಂದು ನುಡಿಕಿರಣ-365 ನುಡಿಮುತ್ತುಗಳ ಚಿಂತನ-ಮಂಥನ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ ಫಕೀರೇಶ್ ಕಣವಿ, ಡಾ. ಕುಮಾರ ಕಣವಿ ,ಮಾಲಾಶ್ರೀ ಕಣವಿ ಅವರು ಸಂಗೀತಕಾರ್ಯಕ್ರಮವನ್ನು ನಡೆಸಿಕೊಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸ್ಥೆಯ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ಅವರು
ಮಾತನಾಡುತ್ತ, ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ ಅನುಭಾವದನುಡಿಗಳಾದ ಮುಂಜಾವಿಗೊಂದು ನುಡಿಕಿರಣ ಉಕ್ತಿಗಳು ಯುವ
ವಿದ್ಯಾರ್ಥಿಗಳಿಗೆ ಸಂಗೀತದ ಮುಖಾಂತರ ಜ್ಞಾನವನ್ನು ಧಾರೆ ಎರೆದರೆ
ಮನಸ್ಸಿನಲ್ಲಿ ಅದು ಮೂಡುತ್ತದೆ. ಅದರ ಮೂಲಕ ಮಾನವೀಯ
ಮೌಲ್ಯಗಳನ್ನು ಬಿತ್ತುವುದರಿಂದ ಮನಸ್ಸು ಜಾಗೃತವಾಗುತ್ತದೆ.
ಸಂಗೀತ ಸುಪ್ತ ಮನಸ್ಸು ಮತ್ತು ಭಾವನೆಯ ಮೇಲೆ ಉತ್ತಮ ಪರಿಣಾಮ
ಬೀರುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಇದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ.ಖಿನ್ನತೆ, ಒತ್ತಡ,ಆತಂಕವನ್ನು ದೂರ ಮಾಡುತ್ತದೆ. ರಕ್ತದೊತ್ತಡ ಕಡಿಮೆಮಾಡುತ್ತದೆ. ಎಲ್ಲರೂಮಧುರವಾದ ಇಂಪಾದ ಸಂಗೀತವನ್ನು ಕೇಳುವ ಮೂಲಕಸಂತೋಷಕರವಾದ ಜೀವನ ತಮ್ಮದಾಗಿಸಿ ಕೊಳ್ಳಬೇಕೆಂದು ಪ್ರೇರೇಪಿಸಿದರು.ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಕಣವಿ ತಬಲಾ ಸಾಥ ನೀಡಿದರು.ತಾಳವನ್ನು ಸುಧೀಂದ್ರ ಕುಲಕರ್ಣಿ, ವಯೋಲಿನ ವಾದ್ಯವನ್ನು ನಾರಾಯಣ ವಿ.ಎ. ನುಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗೀತಾಚನ್ನಾರಡ್ಡಿ ಪಾಟೀಲ, ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕಅಭಿಷೇಕ ಚನ್ನಾರಡ್ಡಿ ಪಾಟೀಲ, ಸರ್ವಜ್ಞ ಚಿಣ್ಣರ ಲೋಕ ಶೈಕ್ಷಣಿಕನಿರ್ದೇಶಕರಾದ ಸಂಗೀತಾ ಅಭಿಷೇಕ ಪಾಟೀಲ, ಸರ್ವಜ್ಞ ಕಾಲೇಜಿನಪ್ರಾಂಶುಪಾಲ ಎಂ.ಸಿ.ಕಿರೇದಳ್ಳಿ, ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನಪ್ರಾಂಶುಪಾಲರಾದ ವಿನುತಾ ಆರ್.ಬಿ., ಸರ್ವಜ್ಞ ಕಾಲೇಜಿನ ಉಪಪ್ರಾಂಶುಪಾಲಪ್ರಶಾಂತ ಕುಲಕರ್ಣಿ, ಸರ್ವಜ್ಞ ಪದವಿ ಕಾಲೇಜಿನಪ್ರಾಂಶುಪಾಲ ಪ್ರಭುಗೌಡ ಸಿದ್ಧಾರೆಡ್ಡಿ, ಸರ್ವಜ್ಞ ಚಿಣ್ಣರ ಲೋಕದಪ್ರಾಂಶುಪಾಲವಿಜಯಕುಮಾರ ನಾಲವಾರ, ಕರುಣೇಶ್‍ಹಿರೇಮಠ, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಗುರುರಾಜ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿದ್ಯಾವತಿ
ಪಾಟೀಲ ನಿರೂಪಿಸಿದರು. ಸೃಜಲ್ಯ ಪ್ರಾರ್ಥಿಸಿದರು.