ಸರ್ದಾರ್ ವಲ್ಲಬಾಯ್ ಪಟೇಲರನ್ನು ಸ್ಮರಿಸಿ: ಐನಾಪುರ್

ಚಿತ್ತಾಪುರ:ಸೆ.18: ಭಾರತ ಗಣರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ವಿಲೀನಗೊಳ್ಳಲು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪಾತ್ರ ಹಿರಿದು ಹೀಗಾಗಿ ಅವರನ್ನು ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಲೆಯ ಮುಖ್ಯಗುರುವಾದ ಚಂದ್ರಕಾಂತ್ ಐನಾಪುರ್ ಹೇಳಿದರು.

ತಾಲ್ಲೂಕಿನ ಕದ್ದರ್ಗಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸರ್ದಾರ್ ವಲ್ಲಭಾಯಿ ಪಾಟೀಲ್, ಭಾವಚಿತ್ರಕ್ಕೆ ಪೂಜ ಸಲ್ಲಿಸಿ, ರಾಷ್ಟ್ರಧ್ವಜ ರೋಹಣ ನೆರವೇರಿಸಿ ಮಾತನಾಡಿದ ಅವರು ಸರ್ದಾರ್ ವಲ್ಲಬಾಯ್ ಪಟೇಲ್ ಅಷ್ಟೇ ಅಲ್ಲದೆ ಇನ್ನು ಅನೇಕ ಮಹಾನ್ ನಾಯಕರ ಶ್ರಮದಿಂದ ಹೈದರಾಬಾದ್ ನಿಜಾಮರ ಕಪಿಮುಷ್ಠಿಯಿಂದ ಬಿಡಿಸಿಕೊಂಡು. ಸೆಪ್ಟೆಂಬರ್ 17, 1948 ರಂದು ವಿಮೋಚನೆ ಪಡೆಯಿತು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಅತಿಥಿ ಶಿಕ್ಷಕ ಜಗದೇವ ಕುಂಬಾರ ಮಾತನಾಡಿ ದೇಶದಲ್ಲಿ ಭ್ರಷ್ಟಾಚಾರ ಅನೈತಿಕತೆಗಳು ತಾಂಡವಾಡುತ್ತಿದ್ದು ಇದನ್ನು ತೊಲಗಿಸಿ ಮಾನವೀಯ ಗುಣಗಳನ್ನು ಬೆಳೆಸಬೇಕು. ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಸತ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಕಲ್ಯಾಣ ಕರ್ನಾಟಕ ವಿಮೋಚನೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಮುನ್ನುಗ್ಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಮಹಾದೇವಪ್ಪ, ನಾಗಮ್ಮ ಕುಂಬಾರ, ಅಂಗನವಾಡಿ ಕಾರ್ಯಕರ್ತೆ ಮೈಹಿಬೂಬಿ, ಸಹಾಯಕಿ ಹಲೀಮ್ ಬಿ, ಸಿದ್ದಪ್ಪ ಕುಂಬಾರ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಾಳಾ, ಸಿದ್ದಲಿಂಗ ಕೋರಿ, ಶೀವರಾಜ್, ಸೇರಿದಂತೆ ಶಾಲೆಯ ಮಕ್ಕಳು ಇದ್ದರು.