ಸರ್ದಾರ್ ವಲ್ಲಬಾಯಿ ಪಟೇಲ್ ಜನ್ಮದಿನಾಚರಣೆ

ಹಗರಿಬೊಮ್ಮನಹಳ್ಳಿ :ಅ.31 ತಾಲೂಕಿನ ವಟ್ಟಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆಶಾ ಕಿರಣ ಮಹಿಳಾ ಅಭಿವೃದ್ಧಿ ಸಂಘ (ರಿ) ಹಾಗೂ ನೆಹರು ಯುವ ಕೇಂದ್ರ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಸರ್ದಾರ ವಲ್ಲಬಾಯಿ ಪಟೇಲ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕ ರ ವೇ ಗ್ರಾಮ ಘಟಕ ಅಧ್ಯಕ್ಷರಾದ ಕೊಟ್ರೇಶ ಹೆಚ್ ಮಾತನಾಡಿ ಸರ್ದಾರ್ ಪಟೇಲ್ ಎಂದೇ ಕರೆಯಲ್ಪಡುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು ಎಂದರು.
ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಒಕ್ಕೂಟ ಅಧ್ಯಕ್ಷಾರ ಬಣಕಾರ ಕೊಟ್ರೇಶ ಮಾತನಾಡಿ ನಂತರ ರಾಷ್ಟ್ರೀಯ ಯುವ ರತ್ನ ಪ್ರಶಸ್ತಿ ಪುರಸ್ಕೃತರಾದ ವೀರೇಶ ಹಿರ್ಲಿಂಗಪ್ಪನವರ್ ಮಾತನಾಡಿ ಸರ್ದಾರ ವಲ್ಲಬಾಯಿ ಪಟೇಲ್ ರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಏಕೀಕರಣ ಚಳುವಳಿಯ ನೇತಾರರು ಎಂದರು .
ನಂತರ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಒಕ್ಕೂಟ ಅಧ್ಯಕ್ಷಾರ ಬಣಕಾರ ಕೊಟ್ರೇಶ ರಾಷ್ಟ್ರೀಯ ಯುವ ರತ್ನ ಪ್ರಶಸ್ತಿ ಪುರಸ್ಕೃತರಾದ ವೀರೇಶ ಹಿರ್ಲಿಂಗಪ್ಪನವರ್ ಸನ್ಮಾಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಶ್ರೀ ಮತಿ ತಾಯಮ್ಮ , ಶ್ರೀ ಮತಿ ಗುಲಾಬಿ , ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಶೃತಿ ,ಶ್ರೀ ಮತಿ ಸುಮಾ ಹಾಗೂ ಅಂಪಮ್ಮ , ಸಣ್ಣ ಮೂಕಪ್ಪ ,ರುದ್ರಪ್ಪ ,ಅಜಯ್ಯ,ಈರಪ್ಪ , ಇತರರಿದ್ದರು.