ಸರ್ಜಾಪೂರ:ಪೋಷಣ ಅಭಿಯಾನ ಮಾಸಾಚರಣೆ

ಲಿಂಗಸಗೂರ.ಸೆ.೨೪-ತಾಲೂಕಿನ ಸರ್ಜಾಪೂರ ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಾಗು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ, ಸಮುದಾಯದವರಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಕುರಿತು ರಸ ಪ್ರಶ್ನೆ ಕಾರ್ಯಕ್ರಮ, ಗ್ರಾಮ ಪಂಚಾಯತಿಗಳಲ್ಲಿ ಪೋಷಣ್ ಪಂಚಾಯತನ್ನು ಹಮ್ಮಿಕೊಂಡು, ಗರ್ಭಿಣಿ, ಬಾಣಂತಿ ಹಾಗು ಹದಿಹರೆಯದ ಹೆಣ್ಣು ಮತ್ತು ಗಂಡು ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಗುರುತಿಸಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಸಾಬಮ್ಮ ಭಂಡಾರಿ, ಸದಸ್ಯರಾದ ರತ್ನಮ್ಮ, ಸಾಬಣ್ಣ ನಾಯಕ, ಗಂಗಮ್ಮ ಬಿಳವಾರ ಹಾಗು ಸಿಬ್ಬಂದಿಗಳಾದ ಕಾಸಿಂಸಾಬ, ಸುರೇಶ, ಶರಣಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಅಮರಮ್ಮ, ರೇಣುಕಾ ಕಲ್ಲೂರ, ಸಾವಿತ್ರಿದೇವಿ, ರೇಣುಕಾದೇವಿ, ಜ್ಯೋತಿ ಮಂಜುಳಾ, ಸರಸ್ವತಿ, ಗಿರಿಜಾ, ನೀಲಮ್ಮ, ಸುಲೋಚನಾ, ಅಂಗನವಾಡಿ ಸಹಾಯಕಿಯರಾದ ಗೋವಿಂದಮ್ಮ,ಲಕ್ಷ್ಮೀ, ಶೈಲಜಾ, ಅಂಬಮ್ಮ, ಲಲಿತಮ್ಮ, ಶಂಕರಮ್ಮ, ನಾಗಮ್ಮ, ಕುಪ್ಪಮ್ಮ, ಲಲಿತಾ, ಬಾಲ ವಿಕಾಸ ಸಲಹಾ ಸಮಿತಿಯ ಅಧ್ಯಕ್ಷರಾದ ಬಸಲಿಂಗಮ್ಮ, ಸುಲೋಚನಾ, ಗದ್ದೆಮ್ಮ ಸೇರಿದಂತೆ ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಭಾಗವಹಿಸಿದ್ದರು.