ಸರ್ಜಾಪುರ: ದದ್ದಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

ರಾಯಚೂರು, ಏ.೧೨- ಸರ್ಜಾಪುರ ಮತ್ತು ಗಾಜರಾಳ ಗ್ರಾಮದಲ್ಲಿ ಪ್ರಭಾವಿ ನಾಯಕರು ಭೂಪತಿ ರೆಡ್ಡಿ , ಶೇಷ ರೆಡ್ಡಿ, ರಾಧಾಕೃಷ್ಣ ರೆಡ್ಡಿ, ಶ್ಯಾಮ ಸುಂದರ ರೆಡ್ಡಿರವರ ನೇತೃತ್ವದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸರ್ಜಾಪುರ, ಗಾಜರಾಳ ಗ್ರಾಮದಲ್ಲಿ ಜನಪ್ರಿಯ ಶಾಸಕರು ಬಸನಗೌಡ ದದ್ದಲ್‌ರವರ ಸಮ್ಮುಖದಲ್ಲಿ ಚಂದ್ರಬಂಡಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸರ್ಜಾಪೂರ, ಗಾಜರಾಳ, ಗ್ರಾಮದ ಪ್ರಭಾವಿ ಮುಖಂಡರುಗಳು ಭೂಪತಿ ರೆಡ್ಡಿ, ಶೇಷ ರೆಡ್ಡಿ ಮತ್ತು ರಾಧಾಕೃಷ್ಣ ರೆಡ್ಡಿ, ಶ್ಯಾಮಸುಂದರ್ ರೆಡ್ಡಿ, ರವರ ನೇತೃತ್ವದಲ್ಲಿ ೪೦೦ಕ್ಕೂ ಅಧಿಕ ಜನರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ, ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರು ಬಸನಗೌಡ ದದ್ದಲ್‌ರವರ ಸರಳತೆ ಮತ್ತು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದರು, ಈ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಕೈ ಬಲಪಡಿಸಿದಂತಾಗಿದೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಪಂಪಾಪತಿ, ಪಕ್ಷದ ಹಿರಿಯ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.