ಸರ್ಜಾಪುರ ಗ್ರಾ.ಪಂ.ಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆ

ಲಿಂಗಸುಗೂರು,ಆ.೦೫-
ಲಿಂಗಸಗೂರು ತಾಲೂಕಿನ ಸರ್ಜಾಪೂರ ಗ್ರಾಮಪಂಚಾಯ್ತಿಗೆ ಎರಡನೆ ಅವಧಿಗೆ ಅಧ್ಯಕ್ಷರಾಗಿ ಜಿಪಂ ಮಾಜಿ ಅಧ್ಯಕ್ಷರಾದ ಗುಂಡಪ್ಪನಾಯಕರ ಸೊಸೆ ರತ್ನಮ್ಮ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ರಂಗಮ್ಮ ನೆಲೋಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಇತ್ತೀಚೆಗೆ ಸರ್ಜಾಪೂರ ಗ್ರಾಮಪಂಚಾಯ್ತಿಗೆ ಚುನಾವಣೆ ನಡೆದು ಅಧ್ಯಕ್ಷಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿತ್ತು ಅದರಲ್ಲಿ ರತ್ನಮ್ಮ ಒಬ್ಬರೆ ಇದ್ದರು ಹೀಗಾಗಿ ಅನಾಯಾಸವಾಗಿ ಅಧ್ಯಕ್ಷ ಪದವಿ ಹುಡುಕಿಕೊಂಡು ಬಂದಂತಾಗಿದೆ. ಚುನಾವಣಾ ಅಧಿಕಾರಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ ಬಾವಿಮನಿಯವರು ಚುನಾವಣೆಯನ್ನು ನಡೆಸಿಕೊಟ್ಟರು
ಗುಂಡಪ್ಪನಾಯಕರು ರಾಜಕೀಯದಲ್ಲಿ ಸ್ಥಾನಮಾನ ಬೇಕೆಂದು ಹುಡುಕಿಹೋದವರಲ್ಲ ಬದಲಾಗಿ ರಾಜಕೀಯವೆ ಅವರನ್ನು ಹುಡುಕೊಂಡು ಬಂದಂತಿದೆ ಇವರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಅಧ್ಯಕ್ಷರಾಗಿ ಅಧಿಕಾರ ನಡೆಸಿದರು ನಂತರ ಅವರ ಶ್ರೀಮತಿಯವರಾದ ದುರಗಮ್ಮನವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು ಇದೀಗ ಅವರ ಸೊಸೆ ರತ್ನಮ್ಮ ಗಂ ಸಾಬಣ್ಣನವರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೂ ಕೂಡ ಅಧ್ಯಕ್ಷಸ್ಥಾನ ಹುಡುಕಿಕೊಂಡು ಬಂದಂತಿದೆ ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ, ಮುಖಂಡರಾದ ಗುಂಡಪ್ಪನಾಯಕ, ಏಕಮರಣ್ಣ, ಶಂಕರಗೌಡ ಯರಡೋಣಿ, ಲಕ್ಷಣ, ಸಾಬಣ್ಣ ಆರ್ ಸಿದನಗೌಡ ಆಂಜನೇಯ ಸೇರಿದಂತೆ ಇದರು