ಸರ್ಕ್ಯೂಟ್ ಹೌಸ್ ಬಳಿ ಅಂಬೇಡ್ಕರ್ ಭವನ ನಿರ್ಮಿಸಲು ಒತ್ತಾಯ

ದಾವಣಗೆರೆ. ಏ.೧೭: ನಗರದ ಲೋಕಿಕೆರೆ ರಸ್ತೆಯ ಸರ್ಕ್ಯೂಟ್ ಹೌಸ್ ಪಕ್ಕದಲ್ಲಿರುವ ಸ್ಥಳದಲ್ಲೇ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ಸಂಸದರ ಜನಸಂಪರ್ಕ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ದಾವಣಗೆರೆ ನಗರ ಘಟಕದ ಅಧ್ಯಕ್ಷರಾದ ಟಿ.ರಮೇಶ್ ತಿಳಿಸಿದ್ದಾರೆಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಹಲವು  ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಸಂವಿಧಾನ ಶಿಲ್ಪಿ ಡಾ.ಅಂ.ಆರ್ ಅಂಬೇಡ್ಕರ್ ಭವನದ ಶಂಕುಸ್ಥಾಪನೆ ಮಾಡಲು ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ಕರೆದಿದ್ದರು. ಆ ಸಭೆಯಲ್ಲಿ ಮುಖಂಡರುಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿದ್ದರು ಈ ವೇಳೆ ಮುಖಂಡರುಗಳುಪಿ.ಬಿ. ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಡಿ.ಸಿ. ಕಛೇರಿಗೆ ಸ್ಥಳಾಂತರಗೊಳ್ಳಲಿದ್ದು ಆ ಜಾಗದಲ್ಲಿ ಆಗಲಿ ಅಥವಾ  ಅಗ್ನಿಶಾಮಕ ಕಛೇರಿ ಪಕ್ಕದಲ್ಲಿ ಇಲ್ಲವೇಲೋಕಿಕೆರೆ ರಸ್ತೆಯಲ್ಲಿರುವ ಸರ್ಕ್ಯೂಟ್ ಹೌಸ್ ಹತ್ತಿರ ನಿಗಧಿಪಡಿಸಿದ್ದ 120 + 100 ಅಡಿ ಜಾಗದಲ್ಲಿ  ಭವನವನ್ನು ನಿರ್ಮಿಸಲು ಒಮ್ಮತದಿಂದ  ಜಿಲ್ಲಾಧಿಕಾರಿಗಳಿಗೆ ತೀರ್ಮಾನಹೇಳಿದ್ದಾರೆ. ನಂತರ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಶಾಸಕರು ಹಾಗೂ ಸಂಸದರಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು ಆದರೆ ಏ.೧೪ ರ  ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ  ಸಂಸದರು ಕೊಂಡಜ್ಜಿ ರಸ್ತೆಯಲ್ಲಿರುವ ಆರ್.ಟಿ.ಓ. ಕಛೇರಿ ಮುಂಭಾಗದ ನಗರಾಭಿವೃದ್ಧಿ ಪ್ರಾಧಿಕಾರದ ಜಾಗದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ ಇದಕ್ಕೆ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು .  ಅದೇ ರಸ್ತೆಯಲ್ಲಿ ಬಾಬು ಜಗಜೀವನ್‌ರಾಂ ಭವನ ಇದೆ.ಆದರೆ ಅದನ್ನು ಸರಿಯಾಗಿ ನಿರ್ವಾಹಣೆ ಮಾಡದೆ ಅವೈಜ್ಞಾನಿಕವಾಗಿ ಕಟ್ಟಡವನ್ನು ಕಟ್ಟಿ ಸರಿಯಾದ ವ್ಯವಸ್ಥೆ ಇಲ್ಲದಂತೆ ಹಾಳುಗೆಡವಿದ್ದಾರೆ . ಆದ್ದರಿಂದ ಈಗಿರುವ ಬಾಬು ಜಗಜೀವನ್‌ರಾಂ ಭವನವನ್ನು ರಿಪೇರಿ ಮಾಡಿಸಿ ಕಾರ್ಯಕ್ರಮಗಳನ್ನು ಮಾಡಲು ಅನುವುಮಾಡಿಕೊಡಲಿ ಹಾಗೂ  ಬಿ.ಆರ್ . ಅಂಬೇಡ್ಕರ್‌ರವರ ಭವನವನ್ನು ಮೊದಲು ನಿಗದಿಪಡಿಸಿದ್ದ ಲೋಕಿಕೆರೆ ರಸ್ತೆಯಲ್ಲಿರುವ ಸರ್ಕ್ಯೂಟ್ ಹೌಸ್ ಪಕ್ಕದಲ್ಲಿ ಇರವ 120 * 100 ಅಳತೆ ಜಾಗದಲ್ಲಿ ನಿರ್ಮಿಸಬೇಕು   ಅದನ್ನು ಬಿಟ್ಟು ಪ್ರಾಧಿಕಾರದ ಜಾಗದಲ್ಲಿ ನಿರ್ಮಿಸಲು ಹೊರಟರೆ ಸಂಸದರ ಜನಸಂಪರ್ಕ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಹಾಗೂ ಶಂಕುಸ್ಥಾಪನೆಗೆ ಆಗಮಿಸುವ ಮುಖ್ಯ ಮಂತ್ರಿಗಳಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತೇವೆ  ಎಂದು ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ಹೆಚ್.ಬಸವರಾಜ್, ನಾಗರಾಜ್,ಪವನ್,ರಾಜು,ಪ್ರಜ್ವಲ್,ಲಿಂಗರಾಜ್ ಇದ್ದರು.