ಸರ್ಕಾರ ಸಂಬಳ ನೀಡಿಲ್ಲ, ಬಸ್ ಬಿಟ್ಟಿಲ್ಲ, ಸರ್ಕಾರಿ ಜಾಗ: ಶಿಬ್ಬಂದಿ ಅತಿಕ್ರಮಣ

ಸಿಂಧನೂರು.ಜ.೧೩- ಸರ್ಕಾರಿ ಜಾಗದಲ್ಲಿ ಸರ್ಕಾರಿ ಸಿಬ್ಬಂದಿಗಳು ಅನಧಿಕೃತವಾಗಿ ವಾಸ ಮಾಡುತ್ತಿದ್ದು. ಸರ್ಕಾರ ಸಂಬಳ ಕೊಡದ ಕಾರಣ ಸಿಬ್ಬಂದಿಗಳು ಕೆಲಸಕ್ಕೆ ಬಾರದ ಕಾರಣ ಗ್ರಾಮೀಣ ಬಾಗಗಳಿಗೆ ಇನ್ನು ಬಸ್ಸುಗಳನ್ನು ಬಿಟ್ಟಿಲ್ಲ ಎಂದು ಡಿಪೊ ಮ್ಯಾನೇಜರ್ ಸಭೆಗೆ ತಿಳಿಸಿದರು.
ತಾ.ಪ. ಸಭಾಂಗಣದಲ್ಲಿ ನಡೆದ ೧೫ನೇಯ ಸಾಮಾನ್ಯ ಸಭೆ ತಾ.ಪ ಅಧ್ಯಕ್ಷರಾದ ಲಕ್ಷ್ಮಿದೇವಿ ಅಮರೀಶ್ ಗುರಿಕಾರ ಆಧ್ಯಕ್ಷತೆಯಲ್ಲಿ ನಡಯಿತು. ಸಭೆಗೆ ಬಂದ ಕೆ.ಎ.ಡಿಬಿ ಂಇ ನಿಮ್ಮ ಂಇಇ ಸಭೆಗೆ ಯಾಕೆ ಬಂದಿಲ್ಲ ಎಂದು ಸದಸ್ಯರು ಕೇಳಿದಾಗ ಮುಂದಿನ ಸಭೆಗೆ ಬರುತ್ತಾರೆ ಎಂದಾಗ ೫ ವರ್ಷಗಳಲ್ಲಿ ಒಂದು ಸಭೆಗೆ ಬಂದಿಲ್ಲ ಂಇಇ ಅನೀಲ ಕುಮಾರ ಬರುವ ತನಕ ನೀವು ಸಭೆಯಿಂದ ಹೊರಗೆ ನಡೆಯಿರಿ ಎಂದು ಆಧ್ಯಕ್ಷರಾದ ಲಕ್ಷ್ಮಿದೇವಿ ಂಇ ಕಾಶಿನಾಥರನ್ನು ತರಾಟೆಗೆ ತೆಗೆದುಕೊಂಡುರು ಹಳ್ಳಿಗಳಿಗೆ ಇನ್ನು ಬಸ್ಸುಬಿಡದ ಕಾರಣ ವಿಧ್ಯಾರ್ಥಿಗಳು ಹಾಗು ಸಾರ್ವಜನಿಕರಿಗೆ ತೊಂದರೆ ಯಾಗಿದ್ದು ಕೂಡಲೆ ಬಸ್ಸಗಳನ್ನು ಬಿಡುವಂತೆ ಸಾರಿಗೆ ಅಧಿಕಾರಿಯನ್ನು ಕೇಳಿದಾಗ ಸರ್ಕಾರ ಸಂಬಳ ಕೊಡದ ಕಾರಣ ಸಿಬ್ಬಂದಿಗಳು ಕೆಲಸಕ್ಕೆ ಬಾರದೆ ಇರುವದರಿಂದ ಬಸ್ಸುಗಳನ್ನು ಹಳ್ಳಿಗಳಿಗೆ ಬಿಟ್ಟಿಲ್ಲ ಎಂದು ಘಟಕ ವ್ಯವಸ್ಥಾಪಕ ನಾಯಕ ಸಭೆಗೆ ತಿಳಿಸಿದಾಗ ಸರ್ಕಾರ ಸಂಬಳ ನೀಡಿದ್ದು ಯಾಕೆ ಸುಳ್ಳು ಹೇಳುತ್ತಿರಿ ಎಂದು ಅಧ್ಯಕ್ಷರು. ಸದಸ್ಯರು ಅಧಿಕಾರಿಯನ್ನ ತರಾಟೆಗೆ ತಗೆದು ಕೊಂಡಾಗ ಇನ್ನು ಮುಂದೆ ಬಸ್ಸುಗಳನ್ನು ಬಿಡು ವದಾಗಿ ಅಧಿಕಾರಿ ಸಭೆಗೆ ತಿಳಿಸಿದರು.
ಸಾಲಗುಂದ ಪಶುಆಸ್ಪತ್ರೆ ಜಾಗದಲ್ಲಿ ನಿವೃತ್ತಿ ಸರ್ಕಾರಿ ಸಿಬ್ಬಂದಿಗಳು ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ಕಟ್ಟಿಸಿಕೊಂಡುವಾಸಮಾಡುತ್ತಿರುವದರಿಂದ ಪಶುಆಸ್ಪತ್ರೆ ಕಟ್ಟಲು ತೊಂದರೆಯಾಗಿದೆ ಕೂಡಲೆ ಅಧಿಕಾರಿಗಳಿಂದ ಜಾಗ ಖಾಲಿ ಮಾಡಿಸಿ ಎಂದು ತಾ.ಪ. ಸದಸ್ಯರಾದ ಹನುಮೇಶ ಸಭೆ ಗಮನಕ್ಕೆ ತಂದಾಗ ತಾಲ್ಲೂಕ ಆರೋಗ್ಯ ಅಧಿಕಾರಿ ಸ್ಥಳಕ್ಕೆ ಹೋಗ ಸಿಬ್ಬಂದಿಗಳಿಂದ ಜಾಗ ಖಾಲಿ ಮಾಡಿಸಿ ಇಲ್ಲದಿದ್ದರೆ ಅವರ ಮೇಲೆ ಠಾಣೆಯಲ್ಲಿ ದೂರು ನೀಡಿ ಎಂದು ತಾ.ಪ. ಇ.ಓ ಪ್ರವೀಣ್ ತಾಲ್ಲೂಕು ಆರೋಗ್ಯ ಅಧಿಕಾರಿಗಳೆ ಸೂಚಿಸಿದರು.
ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಯಾಗಿಂಗ ಮಾಡಿ ಸೊಳ್ಳೆಗಳ ನಿಯಂತ್ರಣ ಮಾಡಿ ಜನರ ಆರೋಗ್ಯ ಕಾಪಾಡಬೇಕು ಎಂದು ಗ್ರಾ.ಪ. ಪಿಡಿಓಗಳಿಗೆ ಇಓ ಆದೇಶ ಮಾಡಿದರು. ಶ್ರೀ ಶಕ್ತಿ ಮಾನವನ ತಾ.ಪ.ವಶಕ್ಕೆ ತೆಗೆದುಕೊಳಲು ಸಭೆ ತೀರ್ಮಾನ ತೆಗೆದುಕೊಂಡಿತು ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಮತ್ತು ತಾ.ಪ. ಸದಸ್ಯರು ಹಾಜರಿದ್ದರು.