ಸರ್ಕಾರ ವಕೀಲರ ನೆರವಿಗೆ ಬರಲಿ: ಕೋಟೇಶ್ವರ ರಾವ್

ಬಳ್ಳಾರಿ, ಮೇ.20: ಕರೋನಾ ದಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಕೂಡಲೇ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ವಕೀಲರ ಹಿತ ಕಾಯಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 100 ಕೂಟಿ ರೂಪಾಯಿ ಹಣಕಾಸಿನ ಸಹಾಯ ನೀಡಲು ಮುಂದಾಗಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಒತ್ತಾಯಿಸಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ, ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಕೆ.ಕೊಟೇಶ್ವರ ರಾವ್ ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಕೋವಿಡ್ ನಿಂದಾಗಿ ಕಳೆದ ವರ್ಷವೂ ಕೇಲವೇ ದಿನಗಳು ಮಾತ್ರ ನ್ಯಾಯಾಲಯದ ಕಾರ್ಯಲಾಪಗಳು ನಡೆದವು ಅಲ್ಲದೇ ನ್ಯಾಯಾಲಯಗಳಲ್ಲಿ ದಿನಕ್ಕೆ 20-30 ಪ್ರಕರಣಗಳನ್ನು ಮಾತ್ರ ನಡೆಸುವುದಕ್ಕೆ ನಿರ್ಧರಿಸಲಾಗಿತ್ತು.‌ ಈ ವರ್ಷವೂ ಕೂಡಾ ಹಲವು ಷರತ್ತುಗಳ ಹಾಗೂ ನಿರ್ಬಂಧಗಳ ಅನ್ವಯ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿದ್ದವು. ಆದರೆ ಕೋವಿಡ್ ನ ಎರಡನೇ ಅಲೆಯ ಪರಿಣಾಮವಾಗಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದ ‌ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿಲ್ಲ.
ಕಲಾಪಗಳು ಸುಗಮವಾಗಿ ಹಾಗೂ ಸರಾಗವಾಗಿ ನಡೆದಲ್ಲಿ ಮಾತ್ರ ಕಕ್ಷಿದಾರರು ನ್ಯಾಯಾಲಯಕ್ಕೆ ಬರಲು ಅನುಕೂಲವಾಗುತ್ತದೆ. ಅಲ್ಲದೇ ವಕೀಲರಿಗೆ ಆದಾಯವೂ ಬರುತ್ತದೆ.
ಲಾಕ್ ಡೌನ್ ಘೋಷಣೆಯಿಂದಾಗಿ ಈಗ ನ್ಯಾಯಾಲಯದ ಕಾರ್ಯ ಕಲಾಪಗಳು ಸ್ಥಗಿತಗೊಂಡಿವೆ. ಕೇವಲ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿರುವದರಿಂದ ವಕೀಲರಿಗೆ ಯಾವದೇ ಆದಾಯ ಬರುತ್ತಿಲ್ಲ. ಈಗ ತಾನೆ ವೃತ್ತಿಗೆ ಬಂದ ವಕೀಲರು ಹಾಗೂ ಯುವ ವಕೀಲರಿಗೆ ಆದಾಯ ಬಹಳ ಕಡಿಮೆ ಇದೆ. ಕೋರ್ಟ್ ಕಲಾಪಗಳು ನಡೆಯದ್ದರಿಂದ ಯುವ ವಕೀಲರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನುಮುಂದೆಯೂ ಕೂಡಾ ಮೂರನೇ ಅಲೆಯ ಭಯ ವಕೀಲರನ್ನು ಕಾಡುತ್ತಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ಸರಕಾರಗಳು ವಕೀಲರ ಹಿತ ಕಾಪಾಡಲು ಯಾವದೇ ಯೋಜನೆಯನ್ನು ಜಾರಿಗೊಳಿಸಿಲ್ಲ.
ವಕೀಲರು ಕೂಡಾ ನಿತ್ಯ ಸಾರ್ವಜನಿಕ ಸಂಪರ್ಕ ಹೊಂದುವುದರಿಂದ ಕೆಲ ವಕೀಲರು ಕೊವಿಡ್ ಬಾದಿತಾರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡ ವಕೀಲರ ಕುಟುಂಬದವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಳೆದ ಬಜೆಟ್ ನಲ್ಲಿಯೂ ಕೂಡಾ ವಕೀಲರಿಗಾಗಿ ಯಾವದೇ ಯೋಜನೆ ರೂಪಿಸಿಲ್ಲ ಹಾಗೂ ಯಾವದೇ ರೀತಿಯ ಹಣ ಮೀಸಲು ಇಟ್ಟಿಲ್ಲ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಹಲವಾರು ವಕೀಲರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿದರೂ ಕೂಡಾ ಸರಕಾರ ವಕೀಲರ ಸಮುದಾಯವನ್ನು ಕಡೆಗಣಿಸುತ್ತಲೇ ಬಂದಿದೆ.
ನಿನ್ನೆ ರಾಜ್ಯ ಸರಕಾರ ಘೋಷಣೆ ಮಾಡಿದ ಪ್ಯಾಕೇಜ್ ನಲ್ಲಿ ಲಾಕ್ ಡೌನ್ ಪರಿಣಾಮವಾಗಿ ಸಂಕಷ್ಟಕ್ಕಿಡಾದ ವಕೀಲರಿಗೆ ಸರಕಾರ ಯಾವದೇ ರೀತಿಯ ಹಣಕಾಸಿನ ಸಹಾಯ ನೀಡಿಲ್ಲ.
ವಕೀಲರಿಗೆ ಸಹಾಯ ಮಾಡಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೂ ಕೂಡಾ ಯಾವುದೇ ರೀತಿಯ ಹಣಕಾಸು ಅನುದಾನ ಸಹಾಯ ಒದಗಿಸಿಲ್ಲ. ಹಲವಾರು ವಕೀಲರು ಸಂಕಷ್ಟಕ್ಕಿಡಾಗಿದ್ದಾರೆ ಅದಕ್ಕಾಗಿ ವಕೀಲರ ನೆರವಿಗೆ ಸರ್ಕಾರ ಬರಬೇಕೆಂದಿದ್ದಾರೆ.