ಸರ್ಕಾರ ರೈತರ ಸಾಲ ಮನ್ನಾ ಮಾಡಲಿ: ಅಭಿಷೇಕ ಪಾಟೀಲ

ಹುಮನಾಬಾದ್:ಜೂ.11: ಕರೋನಾದಿಂದ ಇಡಿ ದೇಶ ತತ್ತರಿಸುತ್ತಿದೆ. ದೇಶದ ಆಸ್ತಿಯಾಗಿರುವ ರೈತರ ಸಾಲಗಳನ್ನು ಮನ್ನಾ ಮಾಡುವುದರ ಮೂಲಕ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಟಿಎಪಿಸಿಎಂಎಸ್ ಅಧ್ಯಕ್ಷರು. ಹಾಗೂ ರಾಜರಾಜೇಶ್ವರಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರು ಆದ ಅಭಿಷೇಕ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇಂಥಹ ಸಮಯದಲ್ಲಿ ರಾಜ್ಯ ಸರ್ಕಾರ ರೈತರ ನೇರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದ ಮುಖ್ಯ ಮಂತ್ರಿಗಳು ಕೃಷಿ ಬಜೆಟ್ ಮಂಡನೆ ಮಾಡುವುದರ ಮೂಲಕ ರೈತರ ಪರವಾಗಿದ್ದೆವೆ ಎಂಬ ಸಂದೇಶ ಸಾರಿದ್ದರು. ಹಾಗಾಗಿ ರೈತರ ಸಾಲಗಳನ್ನು ಮನ್ನಾ ಮಾಡುವುದರ ಮೂಲಕ ರೈತರ ನೇರವಿಗೆ ಬರುವುದು ಅತಿ ಅವಶ್ಯಕವಾಗಿದೆ. ನಾನು ಹಳ್ಳಿಗಳಿಗೆ ಭೇಟಿ ನೀಡಿದಾಗ ಎಲ್ಲಾ ರೈತರು ನಮ್ಮ ಸಾಲಗಳನ್ನು ಮನ್ನಾ ಮಾಡಿಸಿ ಎಂಬ ಬೇಡಿಕೆ ಇಡುತ್ತಿದ್ದಾರೆ. ಹಾಗಾಗಿ ಬೀದರ್ ಜಿಲ್ಲೆ ಅಲ್ಲದೆ ಇಡಿ ರಾಜ್ಯ ರೈತರ ಸಾಲಗಳನ್ನು ಮನ್ನಾ ಮಾಡಬೇಕೆಂದು ಅಭಿಷೇಕ ಪಾಟೀಲ್ ಒತ್ತಾಯಿಸಿದ್ದಾರೆ.