ಸರ್ಕಾರ ಭಾಷಾ ರಾಜಕಾರಣ ಮಾಡಬಾರದು

ಚನ್ನಮ್ಮನ ಕಿತ್ತೂರ,ಸೆ.15: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದಿ ದಿವಸ ಆಚರಣೆ ವಿರೋಧಿಸಿ ಸಮೀಪದ ಖಾನಾಪೂರದಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಾಸೀರ ಬಾಗವಾನ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರವೀಣ ಜೈನ್ ಇವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದಿ ಭಾಷೆ ಹೇರುವುದರಿಂದ ಜನ ಸಾಮಾನ್ಯರಿಗೆ ಅನಾನೂಕೂಲತೆ ಉಂಟಾಗುತ್ತದೆ, ಅವರವರ ರಾಜ್ಯದಲ್ಲಿ ಅವರ ಭಾಷೆಗೆ ಜನ ಹೊಂದಿಕೊಂಡಿರುತ್ತಾರೆ. ಸರ್ಕಾರಗಳು ಭಾಷೆ ರಾಜಕಾರಣ ಮಾಡಬಾರದು. ಇಂತಹದ್ದನ್ನೆಲ್ಲಾ ಕೈಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಸರ್ಕಾರಗಳÀ ಮೇಲೆ ಹರಿಹಾಯ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಲಿಯಾಕ ಅಲ್ಲಿ ಬಿಚ್ಚುನ್ನವರ, ಮುಖಂಡ ರಾಜಾ ರಮಿಜ ಬಾಗವಾನ, ತಾಲೂಕಾಧ್ಯಕ್ಷರು, ಎಮ್.ಎಮ್. ಸಾಹುಕಾರ, ಯುವ ಮೋರ್ಚಾಧ್ಯಕ್ಷರು ಈರಯ್ಯಾ ಹಿರೇಮಠ, ಗೋಪಾಲ ಬಾಗಸೆ, ಯಲ್ಲಪ್ಪ ಕಾತಗಾರ, ದೇವೇಂದ್ರ ಗವಿ, ನಿವೃತ್ತ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಇನಾಮದಾರ, ಮಂಜು ಚಾಗಲೆ, ಸಂಜು ಚಿನಗುಡಿ, ಜೆಡಿಎಸ್ ಪದಾಧಿಕಾರಿಗಳು, ಕಾರ್ಯಕರ್ತರು, ಪಾಲ್ಗೋಡಿದ್ದರು.