ಸರ್ಕಾರ ನಿರ್ಲಕ್ಷ್ಯದಿಂದ ಕೊರೋನಾ ಹೆಚ್ಚಳ

ಲಿಂಗಸೂಗೂರು.ಮೇ.೩-ಜನಸಾಮಾನ್ಯರ ಜೀವನ ಮಾರಣಹೋಮ ಯಾವುದೇ ಮುನ್ನೇಚ್ಚರಿಕೆ ಇಲ್ಲದೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬುದು ಕೊರೋನಾ ರೋಗಿಗಳ ಒದ್ದಾಟ ಆಕ್ಸಿಜನ್ ಸಿಗದೇ ಪ್ರಾಣ ಬಿಡುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಕೂಡಲೇ ಆರೋಗ್ಯ ಮಂತ್ರಿಗಳು ಕೊರೋನಾ ಜೊತೆ ಚೆಲ್ಲಾಟವಾಡದೆ ಆಕ್ಸಿಜನ್ ಪೂರೈಕೆಮಾಡಲು
ಮುಂದಾಗಿ ಇಲ್ಲದಿದ್ದರೆ ರಾಜೆನಾಮೇ ಕೊಟ್ಟು ಮನೆ ಸೇರಿ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರು ಯಡಿಯೂರಪ್ಪ ಸರ್ಕಾರ ಮತ್ತು ಮಂತ್ರಿಮಂಡಲಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಎಂದು ಕೇಳರಿಯದ ನಿಮ್ಮ ರಾಜ್ಯದಲ್ಲಿ ಕೊರೋನಾ ಕೇಕೆ ಹಾಕುತ್ತಾ ಹೋದರೆ ರಾಜ್ಯದ ಪರಿಸ್ಥಿತಿ ಹದೆಗೆಟ್ಟು ಹೊಗಿದೆ ಲಿಂಗಸುಗೂರ ತಾಲೂಕಿನಲ್ಲಿ ಕೊರೋನ ನಿಯಮ ಪ್ರಕಾರ ಯಾವುದೇ ಕೇಲಸಗಳು ನಡೆಯುತ್ತಿಲ್ಲಾ ನಗರ ಪ್ರದೇಶದಲ್ಲಿ ಕೊರೋನಾ ಮಹಾಮಾರಿ ರೋಗ ದಿನಾ ಹೆಚ್ಚಾಗುತ್ತದೆ.
ಸ್ಥಳೀಯ ಪುರಸಭೆ ಅಧಿಕಾರಿಳ ನಿರ್ಲಕ್ಷ್ಯ ದಿಂದ ನಗರ ಪ್ರದೇಶದಲ್ಲಿ ಬಯದ ವಾತಾವರಣ ನಿರ್ಮಾಣವಾಗಿದೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟುಹೊಗಿದೆ ಅಧಿಕಾರಿಗಳಿಂದ ಆಗುತ್ತಿರುವ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿಗೆ ಕಡಿವಾಣ ಹಾಕುವರು ಯಾರು? ಅನ್ಯಾಯ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರ. ಮುಖ್ಯಮಂತ್ರಿಗಳೇ ಆರೋಗ್ಯ ಸಚಿವರೇ ಈ ಭೀಕರ ಘಟನೆ ಏನಂತೀರಾ..?
ನಿಮಗೆ ನೈತಿಕತೆ ಮನುಷ್ಯತ್ವ ಅನ್ನೋದು ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಮಾನ್ಯ ಆರೋಗ್ಯ ಸಚಿವರೇ
ಆಕ್ಸಿಜನ್ ಸಿಗದೆ ಚಾಮರಾಜನಗರದಲ್ಲಿ ೨೨ ಜನರ ದುರ್ಮರಣ ಜಿಲ್ಲಾಡಳಿತಕ್ಕೆ ಎರಡು ದಿನ ಮುಂಚೆ ಮಾಹಿತಿ ಇದ್ದರೂ ಆಕ್ಸಿಜನ್ ಪೂರೈಸುವ ಕೆಲಸವನ್ನು ಮಾಡಿಲ್ಲ.
ಈ ಪರಿಸ್ಥಿತಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ.
ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಎಲ್ಲಾ ಜಿಲ್ಲಾಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವ ಕೆಲಸಕ್ಕೆ ಮುಂದಾಗಬೇಕು ಇಲ್ಲದಿದ್ದರೆ ರಾಜ್ಯದಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗಬಹುದು ಹೊರತು ಕಡಿಮೆಯಾಗುವುದಿಲ್ಲ ಈ ದುರಂತಕ್ಕೆ ನೇರ ರಾಜ್ಯ ಸರ್ಕಾರವೇ ಕಾರಣ ಜೆಡಿಎಸ್ ತಾಲೂಕು ಯುವ ಘಟಕದ ಅಧ್ಯಕ್ಷ ಇಮಿತಿ ಯಾಜ ಪಾಶ ಸರ್ಕಾರದ ವಿರುದ್ಧ ಹಾಗೂ ಸ್ಥಳೀಯ ಪುರಸಭೆ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.