ಸರ್ಕಾರ ನಿಯಮಗಳ ವಿರುದ್ದ ವ್ಯಾಪಾರಸ್ಥರು ಆಕ್ರೋಶ

ಲಿಂಗಸುಗೂರು.ಏ.೨೭-ಪಟ್ಟದ ಪ್ರತಿಷ್ಠಿತ ಹೊಟೆಲ್, ಅಂಗಡಿಗಳಿಗೆ ಇಲ್ಲದ ನಿಯಮ ಬೀದಿಬದಿ ವ್ಯಾಪಾರಿಗಳಿಗೆ ಅನ್ವಯಿಸುತ್ತಿರುವುದು ವ್ಯಾಪಾರಸ್ಥರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ಪುರಸಭೆ ವ್ಯಾಪ್ತಿಯ ಹೊಟೆಲ್ ಖಾನಾವಳಿ ಇತರೆಡೆ ಪಾರ್ಸಲ್ ನೀಡದೆ ಒಳಗಡೆ ಕುಳ್ಳರಿಸಿ ಊಟ, ಉಪಹಾರ ನೀಡುತ್ತಿದ್ದಾರೆ.
ಫುಟ್ಪಾತ್ ಮೇಲೆ ವ್ಯಾಪಾರ ಮಾಡುವ ನಮಗೆ ಇಲ್ಲದ ನೆಪ ಹೇಳಿ ದಂಡ ವಿಧಿಸುತ್ತಿದ್ದಾರೆ. ಕೆಲವೆಡೆ ಉಪಹಾರ, ಕಬ್ಬಿನ ಹಾಲು, ಟೀ ಕುಡಿದು ಹಣ ನೀಡದೆ ದಂಡದ ರಸೀದಿ ನೀಡಿ ಹೋಗುತ್ತಿದ್ದಾರೆ.
ಒಂದು ದಿನ ತೆರಿಗೆ ಅಂತ ರಸೀದಿ ನೀಡುತ್ತಾರೆ. ಇನ್ನೊಂದು ದಿನ ನಿಯಮ ಉಲ್ಲಂಘನೆ ಆಗಿದೆ ಅಂತ ದಂಡ ನೀಡಲು ರಸೀದಿ ನೀಡುತ್ತಾರೆ. ಬೀದಿ ಬದಿ ವ್ಯಾಪಾರಸ್ಥರು ಪುರಸಭೆ ನೌಕರರ ಕಿರುಕುಳಕ್ಕೆ ಬೇಸತ್ತು ಹೋಗಿದ್ದೇವೆ ಎಂದು ಸಾಮೂಹಿಕವಾಗಿ ಆರೋಪಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಿಬೂಬ ಮಾತನಾಡಿ, ಕೋವಿಡ್ ನಿಯಮ ಹೆಸರಲ್ಲಿ ಬೀದಿ ಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವ ಕಾರ್ಯ ನಡೆದಿದೆ. ವ್ಯಾಪಾರ ಇಲ್ಲ ಬರಿ ತೆರಿಗೆ, ದಂಡ ಕಟ್ಟೋದು ಆಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುದರು ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ
ಗಳ ವಿರುದ್ಧ ಕ್ರಮಕ್ಕೆ ಜಗದೀಶ್, ಶರಣಪ್ಪ, ಅಮರೇಶ, ಮಹಾಂತೇಶ, ಬಸವರಾಜ, ಸ್ವಾಮಿ ಶರಣಮ್ಮ, ಆದಮ್ಮ, ಹುಲಿಗೆಮ್ಮ ಸೇರಿದಂತೆ ಇತರರು ಮುಖ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.