ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ಜನರನ್ನು ದಿಕ್ಕು ತಪ್ಪಿಸಿದೆ,ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ಉಗ್ರ ಹೋರಾಟ : ಮಹೇಶ ಕುಮಟಳ್ಳಿ

ಅಥಣಿ : ಜೂ.8:ಗೋವುಗಳ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯನ್ನು ವಾಪಸ್ ಪಡೆದುಕೊಂಡರೆ ಉಗ್ರ ಹೋರಾಟ ಕೈಕೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅವರು ಭಾರತೀಯ ಜನತಾ ಪಕ್ಷ ಅಥಣಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಸಾಂಕೇತಿಕ ಹೋರಾಟದಲ್ಲಿ ಮಾತನಾಡಿ ಗ್ಯಾರೆಂಟಿ ಹೆಸರಲ್ಲಿ ಜನರನ್ನು ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರೆಂಟಿಗಳ ಮೇಲೆ ಷರತ್ತುಗಳನ್ನು ವಿಧಿಸುವ ಮೂಲಕ ಜನರನ್ನು ವಂಚಿಸಲು ಹೊರಟಿದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ಹುನ್ನಾರ ನಡೆಸಿದೆ. ಭಾರತೀಯ ಸಂಸ್ಕøತಿಯಲ್ಲಿ ಗೋವುಗಳನ್ನು ದೇವರೆಂದು ಪೂಜಿಸುತ್ತೇವೆ. ಅವುಗಳ ಸಂತತಿ ಉಳಿಯಬೇಕು ಮತ್ತು ಬೆಳೆಯಬೇಕು. ಅವುಗಳನ್ನು ಕಸಾಯಿಖಾನೆಗೆ ಕಳುಹಿಸುವುದರಿಂದ ಸಂತತಿ ಸಂಪೂರ್ಣ ನಾಶವಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬಾರದು ಎಂದು ಅಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಗ್ಯಾರಂಟಿ ಭರವಸೆಗಳನ್ನು ಯಾವುದೇ ಷರತ್ತು ವಿಧಿಸದೆ ಚುನಾವಣಾ ಪ್ರಚಾರ ಭಾಷಣದಲ್ಲಿ ಆಡಿದ ಮಾತುಗಳಂತೆ ನಡೆದುಕೊಳ್ಳಬೇಕು.
ಚುನವಾಣೆ ಸಮಯದಲ್ಲಿ ನೀಡಿದ ಭರವಸೆಗಳಿಗೆ ಷರತ್ತು ವಿಧಿಸಲಾಗುವುದು ಎಂದು ಆವಾಗ ಹೇಳಿಲ್ಲಾ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಈವಾಗ ಏಕೆ ಷರತ್ತುಗಳನ್ನ ವಿದಿಸುತ್ತಿದ್ದಿರಿ, ಚುನವಾಣೆಯಲ್ಲಿ ಹೇಳಿದಂತೆ ಎಲ್ಲರಿಗೂ ಗ್ಯಾರಂಟಿಗಳು ಮುಟ್ಟಬೇಕು. ಯಾವುದೇ ರೀತಿಯ ಷರತ್ತುಗಳನ್ನು ವಿಧಿಸದರೆ ಇದನ್ನು ಬಿಜೆಪಿ ಒಪ್ಪುವುದಿಲ್ಲಾ. ಹಳ್ಳಿಗಳಿಂದ ಹಿಡಿದು ರಾಜ್ಯ ಮಟ್ಟದವರೆಗೂ ಜನರ ಪರವಾಗಿ ದ್ವನಿ ಎತ್ತಲಾಗುವುದು. ಜನರಿಗೆ ನೀಡಿದ ಗ್ಯಾರೆಂಟಿ ಭರವಸೆಗಳು ಈಡೇರದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದರು.
ರೈತರಿಗೆ ರಾಜ್ಯ ಸರಕಾರದಿಂದ ನಿಡಲಾಗುತ್ತಿದ್ದ ಕಿಸಾನ ಸಮ್ಮಾನ ಹಣವನ್ನು ಕಡಿತ ಗೊಳಿಸಬಾರದು, ಬಿಜೆಪಿ ಸರಕಾರವಿದ್ದಾಗ ಕೈಗೊಂಡ ಕಾಮಗಾರಿಗಳಿಗೆ ತಡೆ ನಿಂತಿರುವುದನ್ನು ತಕ್ಷಣ ಹಿಂಪಡೆಯಬೇಕು, ಆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬೇಕು ಗುತ್ತಿಗೆದಾರರಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬಿಜೆಪಿ ಸರಕಾರವಿದ್ದಾಗ ಕೈಗೊಂಡ ಅಮ್ಮಾಜೇಶ್ವರಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಬಿಸಬೇಕೆಂದು ಆಗ್ರಹಿಸಿದರು.
ನಂತರ ತಹಸಿಲ್ದಾರ್ ಬಿ ಎಸ್ ಕಡಕಬಾವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅಥಣಿ ಮಂಡಳ ಬಿಜೆಪಿ ಅದ್ಯಕ್ಷ ಡಾ.ರವಿ ಸಂಕ, ಮುಖಂಡರಾದ ಸಿದ್ದಪ್ಪಾ ಮುದಕ್ಕಣ್ಣವರ, ಗೀರಿಶ ಬುಟಾಳಿ, ಧರೇಪ್ಪಾ ಠಕ್ಕಣ್ಣವರ, ಪ್ರಭಾಕರ ಚವ್ಹಾಣ, ಮಲ್ಲಪ್ಪಾ ಹಂಚಿನಾಳ, ವಿನಯ ಪಾಟೀಲ, ಪುಟ್ಟು ಹಿರೇಮಠ, ಅವಿನಾಶ ನಾಯಿಕ, ಬಾಳಾಸಾಬ ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ನಿಶಾಂತ ದಳವಾಯಿ, ನಿಂಗಪ್ಪಾ ಪೂಜಾರಿ, ಶಶಿ ಸಾಳ್ವೇ, ಬೀರಪ್ಪಾ ಶೇಡಬಾಳ, ಸಂಗಮೇಶ ಇಂಗಳಿ, ಗೋವಿಂದ ಗಾಡಿವಡ್ಡರ, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.