ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕುಃ ಕೃಷ್ಣಾ ಭೋಸಲೆ

ವಿಜಯಪುರ, ಮಾ.25-ರೈತರ ಕೃಷಿ ಪಂಪಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದ ಹಿನ್ನಲೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಸರ್ಕಾರಕ್ಕೆ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಒತ್ತಾಯಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯೊಂದಿಗೆ ಆಟೋ ಘಟಕದ ನಗರ ಅಧ್ಯಕ್ಷರಾದ ಉಮೇಶ ರುದ್ರಮಣಿ ನೆತ್ತಿಯ ಮೇಲೆ ಕಲ್ಲುಹೊತ್ತುಕೊಂಡು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆಯ ಕಳೆದ ವರ್ಷ ಸತತ ಬರಗಾಲ ಹಾಗೂ ಕೊರೊನಾದಿಂದಾಗಿ ಬೆಳೆಹಾನಿಯಿಂದ ಕಂಗಾಲಾಗಿರುವ ಅನ್ನದಾತರಿಗೆ ಈ ವಷರ್À ವಿದ್ಯುತ್ ಇಲಾಖೆ ಬೆಜವಾಬ್ದಾರಿಯಿಂದ ಬೆಳೆ ಕಳೆದುಕೊಳ್ಳುವ ಸಂಕಷÀ್ಟದ ಸ್ಥಿತಿ ಎದುರಾಗುತ್ತಿದೆ. ಮೇಲಿಂದ ಮೇಲೆ ಸರ್ಕಾರವು ದೇಶದ ಬೆನ್ನೆಲಬಾಗಿರುವ ರೈತರಿಗೆ ಈ ರೀತಿ ತೊಂದರೆ ಈಡು ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಕಳೆದ ಹಲವು ದಿನಗಳಿಂದ ರೈತರ ಪಂಪ ಸೆಟ್ಗಳಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕಾಲುವೆ, ಕೊಳವೆಗಳಲ್ಲಿ ನೀರಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರ ಬೆಳೆಗಳಿಗೆ ಸರಿಯಾಗಿ ನೀರು ಹರಿಯದೇ ರೈತರು ಪರಾದಾಡುವಂತಾಗಿದೆ ಎಂದರು.
ಕೃಷಿ ಪಂಪಸೆಟ್ ಗಳಿಗೆ 3 ಫೇಸ್ ವಿದ್ಯುತ್ ನೀಡಬೇಕಿದ್ದರೂ ಹೆಸ್ಕಾಂ ಅಧಿಕಾರಿಗಳ ಬೆಜಬ್ದಾರಿಯಿಂದ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಅಲ್ಲದೇ ಕೇವಲ 1-2 ಗಂಟೆ ಅವಧಿ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಇದರಿಂದ ಅನ್ನದಾತರ ವಿಶೇಷವಾಗಿ ತೋಟಗಾರಿಕಾ ಬೆಳೆಗಳನ್ನೇ ನಂಬಿಕೊಂಡಿರುವ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಾಗಾಗಿ ಸರ್ಕಾರ ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸೇನೆಯಿಂದ ರೈತರೊಂದಿಗೆ ಸೇರಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿನ ಹೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಸರ್ಕಾರಕ್ಕೆ ಕಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ರಾಜು ಭಿಸೆ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಗಳವೆ, ಜಿಲ್ಲಾ ಆರೋಗ್ಯ ಘಟಕಧ್ಯಕ್ಷ ಡಾ. ಸುರೇಶ ಕಾಗಲಕರರೆಡ್ಡಿ, ವಿಜಯಪುರ ತಾಲೂಕಾ ಅಧ್ಯಕ್ಷ ರಾಜಶೇಖರ ಕೋಟ್ಯಾಳ, ಸಾಗರ ಕಾಳೆ, ರಾಜು ಬಾಲಗಾಂವಿ, ಸೇನೆಯ ಮುಖಂಡರಾದ ಶಿವಾನಂದ ಕವಟಗಿ, ಮಹೇಶ ಕಾಂಬಳೆ, ನಾಗರಾಜ ಕಾಳೆ, ವಿಶಾಲ ಕಾಳೆ, ಸುನೀಲ ಚವ್ಹಾಣ, ದೀಪಕ ಚವ್ಹಾಣ, ರಮೇಶ ಕಾಳೆ, ಶಿವಾಜಿ ಗಾಡವೆ ಮುಂತಾದವರು ಇದ್ದರು.