ಸರ್ಕಾರ ಕಲಾವಿದರಿಗೆ ಪ್ರೋತ್ಸಾಹಿಸಲಿ : ಸಾಹಿತಿ ಕಿರಣ್‌ಮಿರಜ್ಕರ್

ಹಿರಿಯೂರು.ಡಿ.29 : ನಮ್ಮ ನಾಡಿನಲ್ಲಿ ಸಾಕಷ್ಟು ಸಾಂಸ್ಕೃತಿಕ ಕಲೆ ಇದೆ ಸಾಕಷ್ಟು  ಕಲಾವಿದರು ತೀರಾ ಬಡ ಕುಟುಂಬಗಳಿಂದ ಬಂದಂಥಹವರಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ನಿಂದ ಕಲಾವಿದರ  ಬದುಕು ತುಂಬಾ ಸಂಕಷ್ಟಕ್ಕೆ ಸಿಲುಕಿದೆ ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಸಾಹಿತಿ ಕಿರಣ್ ಮಿರಜ್ಕರ್ ಹೇಳಿದರು. ನಗರದ ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಆವರಣದಲ್ಲಿ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ  ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಕಲೆ, ಸಂಗೀತ, ರಂಗಕಲೆ ಹೀಗೆ ವಿಭಿನ್ನವಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ತಮ್ಮ ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಬಂದಿರುವ ಅನೇಕ ಕಲಾವಿದರಿದ್ದಾರೆ ಅಂಥವರು ಇಂದಿನ ದಿನಗಳಲ್ಲಿ ಜೀವನ ನಡೆಸುವುದೂ ಕಷ್ಟಕರವಾಗಿದೆ ಅಂಥವರನ್ನು ಗುರುತಿಸಿ ಸರ್ಕಾರ ಸಹಕಾರ ನೀಡಬೇಕು ಎಂದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ ಇವರು ಮಾತನಾಡಿ ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಮಕ್ಕಳಲ್ಲಿ ಆಸಕ್ತಿ ಹೊರಹೊಮ್ಮುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್.ಜಿ.ರಂಗಸ್ವಾಮಿ ಮತ್ತು ತಂಡ ಸಕ್ಕರ ಇವರು ಕನ್ನಡ ಗೀತೆ ಗಾಯನ ಹಾಗು ಟಿ.ವಿನುತ ಮತ್ತು ತಂಡದವರು ಸುಗಮ ಸಂಗೀತವನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಎಂ.ಬಿ.ಲಿಂಗಪ್ಪ, ಜಗದೀಶ್‌ಯಾದವ್ ಹರ‍್ಮೋನಿಯಂ ವಾದಕ ಎನ್.ಶಿವಲಿಂಗಪ್ಪ, ತಬಲವಾದಕ ಎಸ್.ಅಭಿಷೇಕ್, ಮಂಜಮ್ಮ, ಎನ್.ಜಗದಂಬಾ, ಹೇಮಲತ, ಬಿಂದು,  ದಿವ್ಯಶ್ರೀ, ಭವ್ಯ  ಮತ್ತಿತರರು ಉಪಸ್ಥಿತರಿದ್ದರು.