ಸರ್ಕಾರ ಎಲ್ಲಾ ಜಯಂತಿಗಳನ್ನು ಒಂದೆ ವೇಧಿಕೆಯಲ್ಲಿ ಆಚರಿಸಬೇಕು : ನೀಲಗುಂದ ಶ್ರೀ ಒತ್ತಾಯ.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಏ.8; ಎಲ್ಲ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಮಾಡುವ ಮೂಲಕ ಜಯಂತಿಗಳನ್ನು ಜಾತ್ರೆಯ ರೂಪದಲ್ಲಿ ಆಚರಿಸಬೇಕು ಎಂದು ನಿಲಗುಂದ ಗುಡ್ಡದ ವೀರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳು ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕೆ.ಶಿವರಾಂ ಅಭಿಮಾನಿಬಳಗದ ವತಿಯಿಂದ ಏರ್ಪಡಿಸಿದ್ದ ನಿವೃತ್ತ ಐ.ಎ.ಎಸ್.ಅಧಿಕಾರಿ ಕೆ.ಶಿವರಾಂ ರವರ ನುಡಿನಮನ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.ಕೆ.ಶಿವರಾಂ ಐಎಎಸ್ ಅಧಿಕಾರಿಯಾಗಿದ್ದರು ಅವರಿಗೆ ಆಹಾಂಕರ ಇರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಿದ್ದರು. ಸಮಸ್ಯೆ, ದೂರುಗಳು ಬಂದಲ್ಲಿ ಸ್ಥಳಕ್ಕೆ ಹೋಗಿ ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ, ಜೀವನದಲ್ಲಿ ಶ್ರೇಷ್ಠವಾದ ಶಿಸ್ತು ಸಂಸ್ಕಾರಯುತ ಬದಕನ್ನು ನಡೆಸಿ ಕನ್ನಡದಲ್ಲಿ ಐಎಎಸ್ ಪದವಿ ಪಾಸು ಮಾಡಿ ಉತ್ತಮ ಅಧಿಕಾರಿಯಾಗಿ. ಚಲನ ಚಿತ್ರನಟರಾಗಿ ಸಮಾಜ ಸಂಘಟನೆ ಮಾಡಿ ಉಸಿರು ನಿಂತರೂ ಉತ್ತಮ ಹೆಸರು ಮಾಡಿರುವ ಕೆ.ಶಿವರಾಂ ರವರ ಆದರ್ಶಗಳನ್ನು ತಾವೆಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.ವಿಜಯನಗರ ಜಿಲ್ಲಾ ಚಲುವಾದಿ ಮಹಾಸಭಾದ ಜಿಲ್ಲಾ ಅದ್ಯಕ್ಷ ಬಣ್ಣದ ಮನೆ ಸೋಮಶೇಖರ್ ಮಾತನಾಡಿ ಕೆ.ಶಿವರಾಂ ರವರು ಜನ ಸೇವೆ ಮಾಡುವ ಆಸೆ ಹೊಂದಿದ್ದರು. ಆದರೆ, ರಾಜಕಾರಣದಲ್ಲಿ ನಿರಾಸೆಯಾಗಿತ್ತು. ಪ್ರತಿ ಬಾರಿಯೂ ಟಿಕೆಟ್ ಕೈ ತಪ್ಪಿತ್ತು. ಈ ಬಾರಿ ಸಂಸದರಾಗುವ ಕನಸು ಕಟ್ಟಿಕೊಂಡಿದ್ದರು. ಈ ಹಿಂದೆ ಟಿಕೆಟ್ ಸಿಗದೇ ಇದ್ದಾಗಲೂ ಬೇಸರಗೊಳ್ಳದೇ ಪಕ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರು. ಜನ ಸೇವೆ ಮಾಡುವ ಉದ್ದೇಶದಿಂದ ಕಷ್ಟಪಟ್ಟು ಛಲವಾದಿ ಮಹಾಸಭಾ ಸ್ಥಾಪಿಸಿದ್ದರು. ಇದನ್ನು ಮುಂದುವರಿಸಿಕೊAಡು ಹೋಗುವ ಜೊತೆಗೆ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ಎಲ್ಲರೂ ಸೇರಿ ಅವರನ್ನು ಜೀವಂತವಾಗಿಡುವ ಕೆಲಸ ಮಾಡೋಣ ಎಂದರು.ಶ್ರೀ ಶರಣ ಬಸವ ಬುದ್ದ ಭೀಮಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೊಟ್ರಪ್ಪ ಮಾತನಾಡಿ, ಶಿವರಾಂ ಅವರು ಒಬ್ಬ ದಕ್ಷ ಅಧಿಕಾರಿಯಾಗಿದ್ದರು. ತಳ ಸಮುದಾಯ ಮತ್ತು ಶೋಷಿತ ವರ್ಗಗಳು ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಶ್ರಮ ಹಾಕಿದ್ದರು. ಛಲವಾದಿ ಸಮಾಜವನ್ನು ರಾಜ್ಯದಲ್ಲಿ ಸದೃಢವಾಗಿ ಕಟ್ಟಲು ರಾಜ್ಯದಲ್ಲಿ ಸಂಚರಿಸಿದ್ದರು ಎಂದು ಹೇಳಿದರು.