ಸರ್ಕಾರ ಆದೇಶ ಉಲ್ಲಂಘನೆ, ಅಮಾನತಿಗೆ ಆಗ್ರಹ

ರಾಯಚೂರು,ಆ.೧೮ – ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಸರ್ಕಾರ ಆದೇಶವನ್ನು ಉಲ್ಲಂಘಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಭೆಂದ್ರಯ್ಯ ಅವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ವಯ ಇಲಾಖೆ ವಿಚಾರಣೆಗೆ ಗುರುಪಡಿಸಿ ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಮುಖಂಡರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವೃಷಭೇಂದ್ರಯ್ಯ ಜಿ.ಎಂ.ಅವರು ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ) ರಾಯಚೂರಿನ ಉಪನಿರ್ದೇಶಕರ ಹುದ್ದೆಯಿಂದ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಾದಗಿರಿ ಜಿಲ್ಲೆಗೆ ವರ್ಗಾವಣೆ ಹೊಂದಿ ಸುಮಾರು ೧೮ ದಿನಗಳು ಕಳೆಯುತ್ತಾ ಬಂದಿವೆ. ಇವರ ಆಡಳಿತಾವಧಿಯ ಕಾರ್ಯವೈಖರಿಯು ತೀರಾ ಅತೃಪ್ತ ಮತ್ತು ಅಪ್ರಾಮಾಣಿಕವಾಗಿದೆ.ಇವರ ಅತೃಪ್ತಿದಾಯಕ ಸೇವೆಯ ಕುರಿತು ಜಿಲ್ಲೆಯ ವಿವಿಧ ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಕಾರರು ಸೇರಿದಂತೆ ಜಯ ಕರ್ನಾಟಕ ಸಂಘಟನೆಯೂ ಕೂಡ ಭ್ರಷ್ಟಾಚಾರ ಬಗ್ಗೆ ಲಿಖಿತ ದೂರುಗಳನ್ನು ಸಲ್ಲಿಸಲಾಗಿದ್ದು ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ ಯಾದವ್, ರವಿಕುಮಾರ ಬಿಂದಲ ಭಾವಿ, ಎಂ.ಡಿ. ರಫೀಕ್ ಇದ್ದರು.