ಸರ್ಕಾರ ಆದೇಶಗಳಿಗೆ ಕ್ಯಾರೆ ಎನ್ನದ ಪಿಡಿಓ

ಲಿಂಗಸೂಗೂರು.ಮೇ.೧೭-ಸರ್ಕಾರದ ಆದೇಶಗಳಿಗೇ ಕಿಮ್ಮತ್ತು ನೀಡದ ಈಚನಾಳ ಪಿಡಿಓ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವದರಿಂದ ಗ್ರಾಮಿಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗತೊಡಗಿದೆ.
ಈ ಕುರಿತು ಸರ್ಕಾರ ಗ್ರಾಮ ಪಂಚಾಯತ್ ಇಲಾಖೆಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಆದೇಶ ಹೊರಡಿಸಿದೆ. ಆದರೆ ಆದೇಶ ಪ್ರತಿಗಳಿಗೆ ಬೆಲೆಯೇ ಇಲ್ಲವೆಂಬಂತೆ ಕಸದ ಬುಟ್ಟಿ ಸೇರುತ್ತಿವಿಯಾ? ಎಂಬ ಅಭಿಪ್ರಾಯ ಸಾರ್ವಜನಿಕ ವಲಯಗಳಲ್ಲಿ ದಟ್ಟವಾಗಿ ಹಬ್ಬುತ್ತೀವೆ. ಏಕೆಂದರೆ ಪ್ರಸ್ತುತ ಈಚನಾಳ ಗ್ರಾಮ ಪಂಚಾಯತ್ ಪಿಡಿಓ ಸರ್ಕಾರದ ಆದೇಶಗಳನ್ನ ಉಲ್ಲಂಘಿಸುವ ಮೂಲಕ ಬೆಜವ್ದಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕೊವಿಡ್ – ೧೯ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಜಾಗೃತಿ ಅಭಿಯಾನ ಮಾಡಿಲ್ಲ, ಗ್ರಾಮ ಗಳಲ್ಲಿ ಸ್ಯಾನಿಟೈಜರ್ ಕೂಡ ಮಾಡಿಸುತ್ತಿಲ್ಲ, ಅಲ್ಲದೇ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಕೂಡ ಪಿಡಿಒ ಹಾಜರಾಗುತ್ತೀಲ್ಲ.
ಅದಲ್ಲದೇ ಗ್ರಾಮಿಣ ಭಾಗದ ಜನರಿಗೆ ಆಸರೆ ಯಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಕೂಡ ಅಸಹಕಾರ ತೋರಿಸುತ್ತಿದ್ದಾರೆ. ಸರ್ಕಾರ ನರೇಗಾ ಯೋಜನೆಯಡಿ ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಲು ಆದೇಶ ನೀಡಿದರೂ ಕೂಡ ಅರ್ಜಿ ಸ್ವಿಕರಿಸುತ್ತಿಲ್ಲ. ಒಟ್ಟಾರೆ ಸರ್ಕಾರದ ಆದೇಶಕ್ಕೂ ನನಗೇ ಸಂಬಂಧವಿಲ್ಲದಂತೆ ಕಾರ್ಮಿಕರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಪಿಡಿಒ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲು ಸಾರ್ವಜನಿಕಕರು ಒತ್ತಾಯಿಸುತ್ತಿದ್ದಾರೆ.