ಸರ್ಕಾರಿ ಸ್ಥಳ ಅತಿಕ್ರಮಿಸಲು ಹುನ್ನಾರ: ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ಜು.೨೧- ನಗರದ ವಾರ್ಡ್ ನಂಬರ್ ೩೦ ರಲ್ಲಿ ಸಿಯಾತಲಾಬ ಬಡಾವಣೆಯ ಮುನ್ಸಿಪಲ್ ನಂ ೧೨-೧೦-೯೦ (ಹಳೆ) ೧೨-೧೦-೧೭೫ (ಹೊಸ) ವಿಸ್ತೀರ್ಣ ೮೦x೪೦ ಇದನ್ನು ಸ್ಥಳೀಯ ಅತಿಕ್ರಮಣಕಾರರು ಸ್ಥಳವನ್ನು ಅತಿಕ್ರಮಿಸಲು ಹುನ್ನಾರ ನಡೆಸಿದ್ದು,ಕೂಡಲೇ ಸದರಿ ಸ್ಥಳವನ್ನು ಫೆನ್ಸಿಂಗ್ ಮಾಡಿ ನಗರಸಭೆ ಅಸ್ತಿಯೆಂದು ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಸಿಯಾತಲಾಬ ಬಡಾವಣೆಯಲ್ಲಿ ಮುನ್ಸಿಪಲ್ ನಂ ೧೨-೧೦-೯೦ (ಹಳೆ) ೧೨-೧೦-೧೭೫ (ಹೊಸ) ವಿಸ್ತೀರ್ಣ ೮೦x೪೦ ನಿವೇಶವನ್ನು ತಾಲೂಕ ರೂರಲ್ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿ ಹೆಸರಿನಲ್ಲಿದ್ದು,ಕೇವಲ ಸದರಿ ನಿವೇಶನದಲ್ಲಿ ಸ್ವಯಂ ಘೋಷಿತ ತೆರಿಗೆಯನ್ನು ಪಾವತಿಸಿ ಆಸ್ತಿಯ ನನ್ನದೆಂದು ನಿವೃತ್ತಿ ಕೆ. ಇ ಬಿ ನೌಕರ ಪ್ರವೀಣಕುಮಾರ ಇವರು ಅತಿಕ್ರಮ ಮಾಡಿಕೊಂಡಿದ್ದು,ನಗರಸಭೆ ಪೌರಾಯುಕ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಜಾಗವನ್ನು ಅತಿಕ್ರಮವನ್ನುತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೇಮರಾಜ್ ಅಸ್ಕಿಹಾಳ,ಜಿ.ನರಸಿಂಹಲು,ಪ್ರಭುರಾಜ,ತಾಯಪ್ಪ ಗಾಧಾರ,ಕಲ್ಲೂರು ಲಕ್ಷ್ಮಣ ಸೇರಿದಂತೆ ಇತರರು ಉಪಸ್ಥಿತರಿದ್ದರು.