ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸೂಚನೆ

ಸಿಂದಗಿ;ಡಿ.30: ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಅಭಿವೃದಿಗೆ ಅನೇಕ ಮಜಲುಗಳಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಆದರೆ ಇಲಾಖಾ ಅಧಿಕಾರಗಳ ಪ್ರಚಾರದ ಕೊರತೆಯಿಂದ ಅಲ್ಪಸಂಖ್ಯಾತರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ನೂತನ ಅಧ್ಯಕ್ಷ ಮಹಿಬೂಬ ಸಿಂದಗಿಕರ ಅಸಮಾಧಾನ ವ್ಯಕ್ತ ಪಡಿಸಿದರು.
ಪಟ್ಟಣದ ಮಕ್ಕಾ ಇಸ್ಲಾಂ ಕಮಿಟಿ ಜಮಾತ ಪ್ರಥಮ ಸಭೆಯಲ್ಲಿ ಮಾತನಾಡಿ, ಕಮಿಟಿಯ ಅಭಿವೃದ್ಧಿ ಸಲುವಾಗಿ ಅನೇಕ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲ್ಲಿ ಎಲ್ಲರÀ ಸರ್ವ ಸದಸ್ಯರ ಸಲಹೆ ಮತ್ತು ಅಭಿಪ್ರಾಯದಿಂದ ತಕ್ಕಿಯಾ ಗಲ್ಲಿಯಲ್ಲಿ ಉಚಿತ ಹೊಲಿಗೆ ತರಬೇತಿ (ಶಿವನ ಕ್ಲಾಸ್) ಪ್ರಾರಂಭ ಮಾಡಲು ತೀರ್ಮಾನ ಕೈಕೊಳ್ಳಲಾಗಿದೆ ಎಂದ ಅವರು ಮುಂಬರುವ ದಿನಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಸರಕಾರಿ ಸೌಲಭ್ಯಗಳನ್ನು ಪ್ರಾಮಾಣೀಕವಾಗಿ ಒದಗಿಸಿಕೊಡುತ್ತೇನೆ ಎಂದರು.
ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರ¨ಣೆಗೆ ತಾವು ಕೈಕೊಳ್ಳುತ್ತಿರುವ 9 ವಾರ್ಡಿನ ಮಹಿಳೆಯರಿಗಾಗಿ ಮಕ್ಕಾ ಇಸ್ಲಾಂ ಕಮಿಟಿ ನಿರ್ಣಯ ಕೈಕೊಂಡಂತೆ ಸ್ವಂತ ಹಣದಿಂದ 4 ಹೊಲಿಗೆ ಮಸೀನಗಳನ್ನು ದೇಣಿಗೆ ನೀಡುತ್ತೇನೆ ಎಂದು ಚೆಕ್ ನೀಡಿದರು.
ಸಭೆಯಲ್ಲಿ ಹಿರಿಯ ಉಪಾಧ್ಯಕ್ಷ ಮಹಿಬೂಬ ಸಾಬ ಯಾಳವಾರ್, ಪ್ರಧಾನ ಕಾರ್ಯದರ್ಶಿ ಅಮೀನುದ್ದೀನ ವಾಲಿಕಾರ್ ಖಜಾಂಚಿ ರಫೀಕ ಕೋಳಕೂರ ಹಿರಿಯ ಸದಸ್ಯರಾದ ರಫೀಕ್ ಆಳಂದ ಅಹ್ಮದ್‍ಸಾಬ್ ಸಿಂಧೆ, ಅಲ್ಲಾಭಕ್ಷ ಗುಂದಗಿ, ಚಾಂದಸಾಬ ಗಣಿಯಾರ, ಮೈಬೂಬ್‍ಸಾಬ್ ಆಳಂದ, ಪಾಪು ಜಂಬಗಿ, ಅಲ್ಲಾಬಕ್ಷ ಆಳಂದ, ಭಾಷಾಸಾಬ್ ವಾಲೀಕಾರ ಹಾಗೂ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.